ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ – ಆನಂದ್ ಸಿಂಗ್..!

15 ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದು ಇನ್ನು ಕೆಲವು ಗಂಟೆಗಳು ಕಳೆದಿಲ್ಲ, ಇನ್ನು ಫಲಿತಾಂಶ ಬರಲು ಇನ್ನೆರಡು ದಿನಗಳು ಬಾಕಿ ಇರುವಾಗಲೇ ಆನಂದ್ ಸಿಂಗ್ ಅಚ್ಚರಿಯ ನಡೆಯನ್ನು ಇಟ್ಟಿದ್ದಾರೆ. ಇಂದು ಹೊಸಪೇಟೆಯ ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆನಂದ್ ಸಿಂಗ್ ನಾನು ರಾಜಕೀಯಕ್ಕೆ ಸ್ವಾರ್ಥಕ್ಕಾಗಿ ಬಂದಿಲ್ಲ, ಏನಾದ್ರೂ ಹೆಜ್ಜೆ ಗುರುತು ಸಾಧಿಸಲು ಬಂದಿದ್ದು, ಬಿಜೆಪಿಯನ್ನು ಅನಿವಾರ್ಯವಾಗಿ ತೊರೆಯಬೇಕಾಗಿತ್ತು, ಕ್ಷೇತ್ರದ ಅಭಿವೃದ್ಧಿ ಸಲುವಾಗಿ ಕಾಂಗ್ರೆಸ್ ಸೇರಿದೆ ಆದ್ರೆ ಕಾಂಗ್ರೆಸ್ ನಿಂದ ಕ್ಷೇತ್ರದ ಅಭಿವೃದ್ಧಿಯಾಗಲಿಲ್ಲ, ಹಾಗಾಗಿ ಮತ್ತೆ ಮಾತೃ ಪಕ್ಷಕ್ಕೆ ವಾಪಾಸ್ ಆಗಿದ್ದೇನೆ ಎಂದು ಕಾರ್ಯಕರ್ತರ ಜೊತೆ ಹೇಳಿಕೊಂಡಿದ್ದಾರೆ. ಇನ್ನು ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸುವ ಮೂಲಕ ಕಾರ್ಯಕರ್ತರಿಗೆ ಶಾಕ್ ನೀಡಿದ್ದಾರೆ.

ಮೂರು ಚುನಾವಣೆಯಲ್ಲಿ ಗೆಲ್ಲಿಸಿದೀರ, ನಾಲ್ಕನೇಯದರಲ್ಲೂ ಗೆಲ್ಲಿಸುತ್ತೀರಾ ಅನ್ನೋ ನಂಬಿಕೆ ಇದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ರಾಜಕೀಯದಲ್ಲಿ ಇದ್ದುಕೊಂಡೆ ಕೆಲಸ ಮಾಡುತ್ತೇನೆ ಯುವಕರನ್ನು ಬೆಳೆಸಲು ಮುಂದಾಗುತ್ತೇನೆ ಅಂತ ಆನಂದ್ ಸಿಂಗ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top