ಮುಂಗಾರು ಮಳೆಗೆ ೧೪ ವರ್ಷ ದೀರ್ಘ ದಂಡ ನಮಸ್ಕಾರ ಹಾಕಿ ಭಟ್ರು

ಸ್ಯಾಂಡಲ್‌ವುಡ್‌ನ ಗೋಲ್ಡನ್‌ ಸಿನಿಮಾ ಅಂದ್ರೆ ಮುಂಗಾರು ಮಳೆ, ತನ್ನ ಹಾಡು, ವಿಶೇಷ ರೀತಿಯ ಡೈಲಾಗ್‌ ಡಿಲವರಿಯಿಂದ ಸಿನಿರಸಿಕರನ್ನು ತನ್ನತ್ತ ಸೆಳೆಯುವಂತೆ ಮಾಡಿದ ಸಿನಿಮಾ ಮುಂಗಾರು ಮಳೆ ಇಂದಿಗೆ ರಿಲೀಸ್‌ ಆಗಿ 14 ವರ್ಷಗಳಾಗಿದ್ದು, ಈ ಸಂತಸದ ಕ್ಷಣವನ್ನು ನಿರ್ದೇಶಕ ಯೋಗರಾಜ್‌ ಭಟ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಸ್ಟೈಲ್‌ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಸ್ಟೈಲ್‌ನಲ್ಲಿ ಬರೆದುಕೊಳ್ಳುವ ಮೂಲಕ ಮುಂಗಾರು ಮಳೆಯ 14 ವರ್ಷದ ಸವಿನೆನಪನ್ನು ಮೆಲುಕುಹಾಕಿದ್ದಾರೆ.

ನಮಸ್ತೆ,
ನಾವಿಬ್ಬರೂ, ಜೊತೆಗೆ ಇಡೀ ತಂಡ ಅದೇ ತಾನೇ ಕಣ್ತೆರೆದ ಶಿಶುಗಳಂತೆ ʻಮುಂಗಾರು ಮಳೆʼ ಚಿತ್ರ ಮಾಡಿ, ಜನತೆಗೆ ಅರ್ಪಿಸಿ ಇಂದಿಗೆಎ 14 ವರ್ಷಗಳಾಗಿವೆ.. ಚಿತ್ರಕ್ಕಷ್ಟೇ ಅಲ್ಲದೇ ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ..ಕೆಲಸ ಕಲಿಸಿದ, ಬದುಕುಕೊಟ್ಟ,ಪ್ರೀತಿ ತಿಳಿಸಿದ,ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು..

ಜೈ ಮುಂಗಾರು ಮಳೆ..ಜೈ ಜನತೆ..ಜೈ ಜೀವನ

ನಿಮ್ಮವರು
ಗಣಪ-ಯೋಗರಾಜ್‌ಭಟ್‌

ಅಂತ ಬರೆದುಕೊಳ್ಳುವ ಮೂಲಕ ಮುಂಗಾರು ಮಳೆ ಸಿನಿಮಾದ 14ನೇ ವರ್ಷದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top