ಮೀನು ಊಟಕ್ಕೆ ಕರೆಯಲಿಲ್ಲ ಎಂದು ಚಿಕ್ಕಪ್ಪನನ್ನೇ ಕೊಂದ ಮಕ್ಕಳು

ಮೀನು ಊಟಕ್ಕೆ ತಮಗೆ ಕರೆಯಲಿಲ್ಲ ಎಂದು ಬ್ಯಾಟ್‌ನಿಂದ ಚಿಕ್ಕಪ್ಪನ್ನ ಮಕ್ಕಳು ಕೊಂದ ಘಟನೆ ಉತ್ತರ ಪ್ರದೇಶದ ಸಿಕರೌಲಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ನಡೆದಿರೋದು ಸೆಪ್ಟೆಂಬರ್‌ 18ರಂದು ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ.

ಮೃತಪಟ್ಟ ವ್ಯಕ್ತಿ ತುಷಾರ್‌ ಕಾಂತ್‌ ಎಂದು ಗುರುತಿಸಲಾಗಿದೆ. ತುಷಾರ್‌ ತನ್ನ ಹಿರಿಯ ಸೋದರನ ಜೊತೆ ಮನೆಯ ಮೇಲೆ ಕುಳಿತು ಮೀನು ತಿನ್ನುತಿರುವ ವೇಳೆ ತಮಗೆ ಚಿಕ್ಕಪ್ಪ ಊಟಕ್ಕೆ ಕರೆದಿಲ್ಲ ಎಂದು ಉಳಿದ ಸೋದರರ ಮಕ್ಕಳು ಬ್ಯಾಟ್‌ ಮತ್ತು ಸ್ಟಂಪ್‌ನಿಂದ ತುಷಾರ್‌ ಮೇಲೆ ಹಲ್ಲೇ ನಡೆಸಿದ್ದಾರೆ.

ಗಲಾಟೆ ಜೋರಾಗುತ್ತಿದ್ದಂತೆ ತುಷಾರ್‌ ಹಿರಿಯ ಸಹೋದರ ಪೊಲೀಸರಿಗೆ ವಿಷಯ ತಿಳಿಸಿ, ಗಾಯಗೊಂಡಿದ್ದ ತುಷಾರ್‌ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾನೆ. ತೀವ್ರ ಗಾಯಗೊಂಡಿದ್ದ ತುಷಾರ್‌ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಇನ್ನು ಹಲ್ಲೆ ಘಟನೆ ನಡೆಯುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top