ಮಿಲಿಯನ್ ವೀವ್ಸ್ ಪಡೆದ ಸಲಗ ಮೇಕಿಂಗ್ ವಿಡಿಯೋ ನೋಡಿ ಶರಣ್ ಏನಂದ್ರು ಗೊತ್ತಾ..?

ಸಲಗ ಜಸ್ಟ್ ಮೇಕಿಂಗ್ ವಿಡಿಯೋದಿಂದಲೇ ಇಂಡಸ್ಟ್ರೀಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ವಿಡಿಯೋ ನೋಡಿದ ಪ್ರೇಕ್ಷಕರಲ್ಲಿ ಈ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಬರೀ ಸಿನಿಪ್ರಿಯರಷ್ಟೇ ಅಲ್ಲ. ಕನ್ನಡ ಚಿತ್ರರಂಗದ ಸ್ಟಾರ್ ಫಿಲಂ ಮೇಕರ್ಸ್ ಮತ್ತು ಸ್ಟಾರ್ ಗಳಲ್ಲೂ ಈ ಚಿತ್ರದ ಬಗ್ಗೆ ವಿಶೇಷವಾದ ಭರವಸೆ ಮೂಡಿದೆ. ಈಗಾಗ್ಲೇ ಸಲಗ ಮೇಕಿಂಗ್ ವಿಡಿಯೋನ ನೋಡಿರೋ ಸಾಕಷ್ಟಪು ಸ್ಟಾರ್ ಡೈರೆಕ್ಟರ್ ಗಳು, ಸ್ಟಾರ್ ಗಳು ಸಲಗ ಚಿತ್ರದ ಬಗ್ಗೆ ವಿಶೇಷವಾಗಿ ಮಾತನಾಡ್ತಿದ್ದಾರೆ. ಅದ್ರಂತೆ, ಈಗ ಸ್ಯಾಂಡಲ್ವುಡ್ನ ಕಾಮಿಡಿ ಅಧ್ಯಕ್ಷ ಶರಣ್ ಸಲಗ ಮೇಕಿಂಗ್ ವಿಡಿಯೋ ನೋಡಿ ಪ್ರಶಂಸಿದ್ದಾರೆ. ಮೇಕಿಂಗ್ ವಿಡಿಯೋ ನೋಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಘಟಾನುಘಟಿಗಳೆಲ್ಲಾ ಕೂಡಿ ಮಾಡಿರೋ ಸಿನಿಮಾ. ಮೇಕಿಂಗ್ ವಿಡಿಯೋನೇ ಕ್ರೇಜ್ ಏನು ಅನ್ನೋದನ್ನ ಅಟ್ರ್ಯಾಕ್ಟ್ ಮಾಡ್ತಿದೆ. ಈ ಸಿನಿಮಾ ದೊಡ್ಡ ಸಕ್ಸಸ್ ಆಗಲಿದೆ ಅಂದಿದ್ದಾರೆ. ದುನಿಯಾ ವಿಜಯ್ – ಡಾಲಿ- ಶ್ರೀಕಾಂತ್ ಕಾಂಬಿನೇಷನ್ ದೊಡ್ಡ ಮ್ಯಾಜಿಕ್ ಮಾಡಲಿದೆ ಅನ್ನೋ ಭರವಸೆಯ ಮಾತುಗಳನ್ನಾಡಿದ್ದಾರೆ.

ಸಲಗ ನಿಮೆಗೆಲ್ಲಾ ಗೊತ್ತಿರೋ ಹಾಗೇ, ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದಲ್ಲಿ ಮೂಬಡಿ ಬರ್ತಿರೋ ಸಿನಿಮಾ. ದುನಿಯಾ ವಿಜಯ್ , ಡಾಲಿ ಧನಂಜಯ, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುಧೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಚಿತ್ರ. ಚರಣ್ ರಾಜ್ ಸಂಗೀತ ಸಂಯೋಜನೆಯ, ಈ ಚಿತ್ರವನ್ನ ವೀನಸ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಡಿಯಲ್ಲಿ ಟಗರು ನಿರ್ಮಾಪಕ ಕೆ.ಪಿ,ಶ್ರೀಕಾಂತ್ ನಿರ್ಮಿಸ್ತಿದ್ದಾರೆ. ಮೇಕಿಂಗ್ ವಿಡಿಯೋದಿಂದ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ಸಲಗ ಚಿತ್ರಕ್ಕೆ ಇಡೀ ಕನ್ನಡ ಚಿತ್ರೋದ್ಯಮದ ಪಾಸಿಟೀವ್ ಆಗಿ ರಿಯಾಕ್ಟ್ ಮಾಡ್ತಿದ್ದು, ಸಿನಿಪ್ರಿಯರ ವಲಯದಲ್ಲಿ ಸಲಗ ತುಂಬಾ ದೊಡ್ಡ ಮಟ್ಟದ ಟಾಕ್ ಕ್ರಿಯೇಟ್ ಮಾಡ್ತಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top