
ಕೊರೋನಾ ತಡೆಗಟ್ಟಲು ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಮಾಡಿದ್ದು, ಅದರಲ್ಲಿ ಪ್ರಮುಖವಾದದ್ದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಅನ್ನೋ ನಿಯಮವನ್ನು ಕಟ್ಟು ನಿಟ್ಟಾಗಿ ಹಾಕಲಾಗಿತ್ತು, ಇನ್ನು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿತ್ತು, ಹೀಗಾಗಿ ಇದೀಗ ಕೊರೋನಾ ಟೈಂನಲ್ಲಿ ಅಂದರೆ ಜೂನ್ ನಿಂದ ಅಕ್ಟೋಬರ್ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ ಜನರಿಮದ ನಾಲ್ಕು ತಿಂಗಳಿನಿಂದ ಒಟ್ಟು ಮೂರು ಕೋಟಿ ರೂಪಾಯಿ ದಂಡವನ್ನು ಬಿಬಿಎಂಪಿ ಸಂಗ್ರಹಿಸಿದೆ.
ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ಮತ್ತು ಸಾರ್ವಜನಿಕವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದ ಜನರಿಗೆ ದಂಡ ವಿಧಿಸಿದ್ದು, ಜೂನ್ 9ರಿಮದ ಆರಂಭವಾದ ದಂಡ ಪ್ರಯೋಗ, ಅಕ್ಟೋಬರ್ 8 ವರೆಗೆ ನಿಯಮ ಉಲ್ಲಂಘಿಸಿದ ಒಟ್ಟು 1,42,600 ಜನರಿಂದ ಒಟ್ಟು 3,05,37,380.65 ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಇನ್ನು 170 ಕ್ಕೂ ಹೆಚ್ಚು ಸಂಸ್ಥೆಗಳನ್ನು ನಿಯಮ ಉಲ್ಲಂಘಿಸಿದ್ದಕ್ಕೆ ಸೀಲ್ ಕೂಡ ಮಾಡಲಾಗಿದೆ.
ಇನ್ನು ಕೊರೋನಾ ಪ್ರಾರಂಭದಲ್ಲಿ ಮಾಸ್ಕ್ ಧರಿಸದವರಿಗೆ 100 ರೂಪಾಯಿ ದಂಡವನ್ನು ವಿಧಿಸಲಾಗುತ್ತಿತ್ತು, ನಂತರ ಅಕ್ಟೋಬರ್ 2ರಿಂದ ಮಾಸ್ಕ್ ಧರಿಸಿದವರಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗಿತ್ತು, ಆದ್ರೆ ಸಾರ್ವಜನಿಕವಾಗಿ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ದಂಡದ ಪ್ರಮಾಣವನ್ನು ಅಕ್ಟೋಬರ್ 7 ರಿಂದ 1000 ರೂಪಾಯಿಯಿಂದ 250 ರೂಪಾಯಿಗೆ ಇಳಿಸಿತು, ಇನ್ನು ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ಇದ್ದ ದಂಡವನ್ನು 500 ರೂಪಾಯಿಗೆ ಇಳಿಸಿತು. ಆರೋಗ್ಯದ ದೃಷ್ಟಿಯಿಂದ ಮತ್ತು ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಕಡ್ಡಾಯವಾಗಿದ್ರು, ಸಾರ್ವಜನಿಕರು ಮಾತ್ರ ಯಾವುದು ಲೆಕ್ಕವಿಲ್ಲೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಅಸಡ್ಡೆ ತೋರುತ್ತಿರುವುದ ಸದ್ಯ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಮಾರ್ಷಲ್ಸ್ ಹಾಗೂ ಪೊಲೀಸರು ಕೋವಿಡ್ ನಿಯಮ ಮೀರುವ ಜನರಿಗೆ ದಂಡವನ್ನು ಹಾಕಿ ಬಿಸಿಮುಟ್ಟಿಸುತ್ತಿದ್ದಾರೆ.