ಮಾಸ್ಕ್‌ ಧರಿಸದೇ ಇದ್ರೆ ಕೊರೋನಾ ಬಗ್ಗೆ ಬರೆಯಬೇಕು ಪ್ರಬಂಧ

ಕೊರೋನಾ ಹಾವಳಿ ದೇಶದಲ್ಲಿ ಎರಡನೇ ಹಂತದಲ್ಲಿ ಪರಿಣಾಮಕಾರಿಯಾಗಿ ಬೀರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದು, ಈಗಾಗಲೇ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸುತ್ತಿದ್ರೆ. ಗುಜರಾತ್‌ನಲ್ಲಿ ಮಾಸ್ಕ್‌ ಹಾಕದೇ ಓಡಾಡುವ ಜನರು ಕೊರೋನಾ ಕೇರ್‌ ಸೆಂಟರ್‌ನಲ್ಲಿ ಸೇವೆ ಸಲ್ಲಿಸುವಂತೆ ಅಲ್ಲಿನ ಹೈಕೋರ್ಟ್‌ ಸೂಚಿಸಿದೆ.

ಇತ್ತ ಮಧ್ಯಪ್ರದೇಶದಲ್ಲಿ ಮಾಸ್ಕ್‌ ಧರಿಸದವರು ವಿನೂತನ ಶಿಕ್ಷೆ ನೀಡಲು ಜಿಲ್ಲಾಡಳಿತ ಮುಂದಾಗಿದ್ದು, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಾಸ್ಕ್‌ ಧರಿಸದೆ ಓಡಾಡಿ ಸಿಕ್ಕಿ ಬಿದ್ದರೆ ಕೋವಿಡ್‌ 19 ಕುರಿತಾಗಿ ಪ್ರಬಂಧವನ್ನು ಬರೆಯಬೇಕು ಅನ್ನೋ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ನಿಯಮವನ್ನು ಉಲ್ಲಂಘಿಸಿದವರಿಗೆ ಓಪನ್‌ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ಅಲ್ಲಿನ ಜಿಲ್ಲಾಡಳಿತ ಹೇಳಿದೆ. ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರೋಕೋ-ಟೋಕೋ ಅನ್ನೋ ಅಭಿಯಾನ ಆರಂಭಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top