ಮಾಸ್ಕ್‌ ಧರಿಸದಿದ್ದರೆ 1000 ಇದ್ದ ದಂಡ ಇನ್ನು ಮುಂದೆ 250 ರೂಪಾಯಿ

ಕೊರೋನಾ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಾಮಾವಳಿಗಳನ್ನು ಹಾಕಿಕೊಂಡಿರೋ ಸರ್ಕಾರ ಮಾಸ್ಕ್‌ ಧರಿಸದೇ ಇರುವವರಿಗೆ 1000 ರೂಪಾಯಿ ದಂಡ ಹಾಕುವ ನಿಯಮವನ್ನು ತಂದಿತ್ತು, ದೊಡ್ಡ ಮೊತ್ತದ ದಂಡ ಹಾಕುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು, ಅಷ್ಟೇ ಅಲ್ಲದೇ ಸರ್ಕಾರ ಟೀಕೆಗೆ ಗುರಿಯಾಗಿತ್ತು, ಇದೀಗ ಸರ್ಕಾರ ಮಣಿದಿದ್ದು, 1000 ರೂಪಾಯಿ ದಂಡದ ಬದಲು ಮಾಸ್ಕ್‌ ಧರಿಸದೇ ಇದ್ದರೆ 250 ರೂಪಾಯಿ ದಂಡ ವಿಧಿಸುವಂತೆ ಸುತ್ತೋಲೆಯನ್ನು ಹೊರಡಿಸಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್‌ ಧರಿಸದೆ ಇದ್ದರೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು, ಇನ್ನು ಮುಂದೆ 100 ರೂ ದಂಡವನ್ನು ವಿಧಿಸಲಾಗುವುದು.

ಇನ್ನುಮಾಸ್ಕ್‌ ಧರಿಸದಕ್ಕೆ 1000 ದಂಡ ವಿಧಿಸುತ್ತಿದ್ದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು, ಕೆಲಸ ಇಲ್ಲದ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರೋ ಟೈಂನಲ್ಲಿ ಸರ್ಕಾರ ಜನರಿಂದ ಹಣ ಸುಲಿಗೆ ಮಾಡುತ್ತಿದೆ ಎಂದು ಟೀಕೆ ಮಾಡಿ ಹೇಗ ಹಣವನ್ನುಕಟ್ಟುವುದು ಎಂದು ಪ್ರಶ್ನೆ ಮಾಡಿದ್ದರು, ಇದೀಗ ಸರ್ಕಾರ ದಂಡದ ಮೊತ್ತವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top