ಮಾರ್ಚ್ 31ರ ವರೆಗೆ ರೈಲು ಸಂಚಾರ ಬಂದ್!

ಕೊರೊನಾ ವೈರಸ್ ತಡೆಗಟ್ಟಲು ಮುನ್ನೆಚ್ಚರಿಗೆ ಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ತೆಗೆದುಕೊಂಡಿದ್ದು, ಈಗಾಗಲೇ ಅನೇಕ ಕಂಪನಿಗಳು ಮಾರ್ಚ್ 31ರ ವರೆಗೆ ರಜೆಯನ್ನು ಘೋಷಿಸಿ ಆಗಿದೆ, ಇನ್ನು ದೇಶದಲ್ಲಿ ಕರೆ ನೀಡಿದ್ದ ಜನತಾ ಕಫ್ರ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಹೀಗಿರುವಾಗಲೇ ಈಗ ರೈಲ್ವೇ ಇಲಾಖೆ ಮಾರ್ಚ್ 31ರ ವರೆಗೆ ರೈಲು ಸಂಚಾರ ಮಾಡದಿರಲು ನಿರ್ಧಾರವನ್ನು ಕೈಗೊಂಡಿದೆ.

ಕೇವಲ ಗೂಡ್ಸ್ ರೈಲುಗಳು ಮಾತ್ರ ಸಂಚಾರವನ್ನು ಮಾಡಲಿದ್ದು, ದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಸಲುವಾಗಿ ಗೂಡ್ಸ್ ರೈಲುಗಳು ಸಂಚಾರ ಮಾಡಲಿದ್ದು, ಸಾರ್ವಜನಿಕ ಸಂಚಾರಕ್ಕೆ ರೈಲುಗಳ ಸೇವೆ ಲಭ್ಯವಿರುವುದಿಲ್ಲ. ಇನ್ನು ಈಗಾಗಲೇ ಕರ್ನಾಟಕದಲ್ಲಿ ಜನತಾ ಕಫ್ರ್ಯೂಗೆ ಬೆಂಬಲ ವ್ಯಕ್ತವಾಗಿದ್ದು. ರಾಜ್ಯದಲ್ಲಿ ಮಾರ್ಚ್ 31ರ ವರೆಗೆ ಬಂದ್ ಮಾಡಲು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಮುಂಖ್ಯಮಂತ್ರಿಗಳು ಸಭೆಗಳನ್ನು ಸಹ ನಡೆಸುತ್ತಿದ್ದಾರೆ. ಈಗಾಗಲೇ ಮಾರ್ಚ್ 31ರ ವರೆಗೆ ಒಡಿಸಾ ಸೇರಿದಂತೆ ಇನ್ನೆರಡು ರಾಜ್ಯಗಳು ಮಾರ್ಚ್ 31ರ ವರೆಗೆ ಬಂದ್ ಮಾಡಲು ನಿರ್ಧರಿಸಿದ್ದು. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಕಲ ತಯಾರಿಗಳನ್ನು ನಡೆಸುತ್ತಿವೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top