ಮಾರ್ಚ್‌ನಲ್ಲಿ 14ದಿನ ಬ್ಯಾಂಕ್‌ ವ್ಯವಹಾರ ಇರೊಲ್ಲ..!

ಮಾರ್ಚ್‌ ತಿಂಗಳಲ್ಲಿ ಬ್ಯಾಂಕ್‌ ಗ್ರಾಹಕರಿಗೆ ಹಣಕಾಸಿನ ವ್ಯವಹಾರದಲ್ಲಿ ಒಂದಿಷ್ಟು ವ್ಯತ್ಯಾಸಗಳಾಗಲಿದೆ.ಯಾಕಂದ್ರೆ ಮಾರ್ಚ್‌ ತಿಂಗಳಲ್ಲಿ ಬರೋಬ್ಬರಿ 14ದಿನ ಬ್ಯಾಂಕ್‌ ರಜೆ ಇರಲಿದ್ದು, ಹೀಗಾಗಿ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕಿಂಗ್‌ ವ್ಯವಹಾರದಲ್ಲಿ ದೊಡ್ಡ ವ್ಯತ್ಯಾಸ ಕಾಣುವ ಸಾಧ್ಯತೆಗಳಿವೆ.

ಮಾರ್ಚ್‌ ತಿಂಗಳಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೂರು ದಿನ ಬ್ಯಾಂಕ್‌ ಮುಷ್ಕರ ಇರಲಿದೆ, ಅಂದರೆ ಮಾರ್ಚ್‌ 11 ರಿಂದ 13ವರೆಗೆ ಬ್ಯಾಂಕ್‌ ಮುಷ್ಕರವಿದ್ದು, ಅದರ ನಂತರ ಹೋಳಿ ಮತ್ತು ಯುಗಾದಿ ಹಬ್ಬ ಮತ್ತು ಎರಡನೇ ಶನಿವಾರ ಮತ್ತು ಭಾನುವಾರಗಳು ಸೇರಿ ಒಟ್ಟು 14ದಿನಗಳು ಬ್ಯಾಂಕ್‌ ವ್ಯವಹಾರಗಳು ಇರುವುದಿಲ್ಲ ಆದ್ದರಿಂದಾಗಿ ಬ್ಯಾಂಕಿಂಗ್‌ ವ್ಯವಹಾರದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳು ಇವೆ.

ಇನ್ನು ಬ್ಯಾಂಕ್ ರಜೆ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಹಣ ಸಿಗುತ್ತದೆಯೋ ಅಥವಾ ಅದರಲ್ಲೂ ವ್ಯತ್ಯಾಸಗಳು ಎದುರಾಗಲಿದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರು ಬ್ಯಾಂಕ್ ಸೇವೆ ಮಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ.

ಮಾರ್ಚ್ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್ ಏಕೆ ರಜೆ ಅಂತಾ ನೋಡೋದಾದ್ರೆ:

  • ಮಾರ್ಚ್ 1 – ಭಾನುವಾರ
  • ಮಾರ್ಚ್ 8 – ಭಾನುವಾರ
  • ಮಾರ್ಚ್ 9 ಮತ್ತು 10 – ಹೋಳಿ
  • ಮಾರ್ಚ್ 11, 12 ಮತ್ತು 13 – ಬ್ಯಾಂಕ್ ಮುಷ್ಕರ
  • ಮಾರ್ಚ್ 14 – ಎರಡನೇ ಶನಿವಾರ
  • ಮಾರ್ಚ್ 15 – ಭಾನುವಾರ
  • ಮಾರ್ಚ್ 22 – ಭಾನುವಾರ
  • ಮಾರ್ಚ್ 25 – ಯುಗಾದಿ
  • ಮಾರ್ಚ್ 28 – ನಾಲ್ಕನೇ ಶನಿವಾರ
  • ಮಾರ್ಚ್ 31 – ಆರ್ಥಿಕ ವರ್ಷದ ಕಡೆ ದಿನ
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top