ಮಾರಿ‌ಹಬ್ಬಕ್ಕೆ ನೆಂಟರ ಕರೆಯಲು ಹೋದವರು ಹೆಣವಾದರು.!


ಲಕ್ಕವಳ್ಳಿ/ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯುತ್ತಿರುವ ಮಾರಿಹಬ್ಬಕ್ಕೆ ನೆಂಟರ ಕರೆಯಲು ಹೋದ ಯುವಕರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು ಕಂಡ ಧಾರುಣ ಘಟನೆ ಸಂಜೆ 5.30ರ ಸುಮಾರಿಗೆ ಲಕ್ಕವಳ್ಳಿ-ಬಿಆರ್ ಪಿ ಸಮೀಪದ ಹುಣಸವಳ್ಳಿ ಸಮೀಪ ನಡೆದಿದೆ.
ಶಿವಮೊಗ್ಗದ ನವುಲೆಯ ಮೋಹನ್ ಹಾಗೂ ಕುಮಾರ್ ಸಾವು ಕಂಡ ದುರ್ದೈವಿಗಳು. ಬೈಕ್ ನಲ್ಲಿ ತೆರಳುತ್ತಿದ್ದ ಇವರು ಎದುರಿಗೆ ಬರುತ್ತಿದ್ದ ಟಿಪ್ಪರ್ ಗೆ ಢಿಕ್ಕಿ ಹೊಡೆದು ಸಾವು ಕಂಡಿದ್ದಾರೆ ಎನ್ನಲಾಗಿದೆ.


ಹುಣಸವಳ್ಳಿ ಸಮೀಪ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದು, ಹೆಲ್ಮೆಟ್ ಧರಿಸದ ಇವರು, ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸಿದಾಗ ಘಟನೆ ಸಂಭವಿಸಿದ್ದು, ಅಫಘಾತದಲ್ಲಿ ದೇಹದ ಅಂಗಾಂಗಗಳು ಛಿದ್ರವಾಗಿವೆ.
ಇಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡಲು ಬಂದಾಗ ದಂಡದ ಭೀತಿಯಿಂದ ಇಂತಹ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ. ಘಟನೆಗೆ ಪೊಲೀಸರೆ ಹೊಣೆ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top