ಮಾಜಿ ಸೈನಿಕನಿಗಾಗಿ ಮೋದಿಗೆ ಪತ್ರ ಬರೆದ ಜೊತೆಜೊತೆಯಲಿ ಅನಿರುಧ್

ಸೌತ್ ಇಂಡಿಯಾದ ಮೋಸ್ಟ್ ಪಾಪುಲರ್ ಸೀರಿಯಲ್ ಅಂದ್ರೆ ಅದು ಜೊತೆಜೊತೆಯಲಿ, ಜೊತೆ ಜೊತೆಯಲಿ ಧಾರಾವಾಹಿ ಎಷ್ಟು ಹೆಸರು ಮಾಡಿದೆಯೋ ಅದರಲ್ಲಿ ಬರೋ ಪಾತ್ರಗಳು ಸಹ ಅಷ್ಟೇ ಹೆಸರು ಮಾಡಿವೆ, ಇನ್ನು ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಳ್ಳೊ ಅನಿರುಧ್ ಈಗ ಎಲ್ಲರ ನೆಚ್ಚಿನ ಹಾಟ್ ಫೇವರಿಟ್..ಬೆಳ್ಳಿ ತೆರೆಯಲ್ಲಿ ಅಷ್ಟೇನೂ ಸಕ್ಸಸ್ ಕಾಣದ್ದ ಅನಿರುಧ್‍ಗೆ ಸಕ್ಸಸ್ ತಂದು ಕೊಟ್ಟಿದ್ದು ಕಿರುತೆರೆಯ ಜೊತೆಜೊತೆಯಲಿ ಧಾರಾವಾಹಿ, ಇನ್ನು ಧಾರಾವಾಹಿಯ ಯಶಸ್ಸು ದೊಡ್ಡ ಮಟ್ಟದಲ್ಲಿ ಏರುತ್ತಾ ಹೋದಂತೆ ಅದರ ಜೊತೆಯಲ್ಲಿ ಏರುತ್ತಾ ಹೋಗ್ತಾ ಇರೋದು ಸಹ ಅನಿರುಧ್ ಕೂಡ.. ಇನ್ನು ಅನಿರುಧ್ ಧಾರಾವಾಹಿಯ ಜೊತೆಜೊತೆಯಲ್ಲಿಯೇ ಅನೇಕ ಸಮಾಜಮುಖಿ ಕಾರ್ಯಕ್ರಮದಲ್ಲಿದಲ್ಲೂ ಭಾಗಿಯಾಗಿ ಮಾದರಿಯಾಗಿರುವ ವ್ಯಕ್ತಿ, ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಅನಿರುಧ್, ಇತ್ತಿಚೆಗೆ 94ವರ್ಷದ ಮಾಜಿ ಸೈನಿಕನ ಬಗ್ಗೆ ಬರೆದುಕೊಂಡಿದ್ದು, ಅಷ್ಟೇ ಅಲ್ಲದೇ ಆ ಮಾಜಿ ಸೈನಿಕನ ಕಷ್ಟಕ್ಕೆ ಸ್ಪಂಧಿಸ ಬೇಕು ಅಂತ ಹೇಳಿ ಪ್ರಧಾನಿ ಮೋದಿಗೆ ಮೇಲ್ ಮಾಡುವ ಮೂಲಕ ಆ ಮಾಜಿ ಸೈನಿಕನ ಕಷ್ಟವನ್ನು ತಿಳಿಸಿದ್ರು, ಇನ್ನು ಈ ಎಲ್ಲಾ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಚ್ಚಿಕೊಂಡಿದ್ದ ಅನಿರುಧ್‍ಗೆ ಈಗ ಎಲ್ಲಾ ಕಡೆಯಿಂದಲ್ಲೂ ಮೆಚ್ಚುಗೆಯ ಮಾತುಗಳು ಮತ್ತು ಪ್ರಶಂಸೆಗಳು ಲಭ್ಯವಾಗ್ತಾ ಇದೆ.

ಹೌದು ಅನಿರುಧ್ ಇತ್ತಿಚೆಗೆ ನಮ್ಮ ದೇಶದ ಹೆಮ್ಮೆಯ,ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರು ಕಟ್ಟಿ ಬೆಳೆಸಿದ್ದ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ , ಬೋಸ್ ಜೊತೆ ಕಾರ್ಯ ನಿರ್ವಹಿಸಿದ್ದ ಸೈನಿಕರಾದ 94ವರ್ಷದ ಶ್ರೀ ಪಾಂಡಿಯಾ ರಾಜ್ ಅವರ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಮೇಲ್ ಒಂದನ್ನು ಕಳುಹಿಸಿದ್ದು, ಆ ಮೇಲ್‍ನಲ್ಲಿ ಶ್ರೀ ಪಾಂಡಿಯಾ ರಾಜ್ ಅವರಿಗೆ 94ವರ್ಷವಾದರೂ ಇನ್ನು ಒಂದು ಸ್ವಂತ ಮನೆ ಇಲ್ಲ, ಅವರು ತಮಿಳುನಾಡಿನ ರಾಮನಾಥಪುರಂನಲ್ಲಿ ಸಣ್ಣ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ ಎಂದು ತಿಳಿಸಿದ್ದು, ಈ ಮೂಲಕ ತಮ್ಮ ಸಾಮಾಜಿಕ ಕಾಳಜಿ ಮತ್ತು ಸ್ವತಂತ್ರ್ಯ ಹೋರಾಟಗಾರರಿಗೆ ಸಿಗಬೇಕಾದ ಗೌರವದ ಬಗ್ಗೆ ನೆನಪಿಸಿದ್ದಾರೆ.
ಈ ವಿಚಾರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಮಾಡಿರುವ ಮೇಲ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಬಗ್ಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಅಷ್ಟೇ ಅಲ್ಲದೇ ಅನಿರುಧ್ ಅಭಿಮಾನಿಗಳು `ವೆಲ್ ಡನ್ ದಾದಾ’ ಅನ್ನೋ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top