ಮನೆ ಮುಂದೆ ತುಳಸಿ ಗಿಡ ಬೆಳಸಿ ಪೂಜೆಮಾಡಿ ಮನೆಯಲ್ಲಿ ಲಾಭವೋ ಲಾಭ..!

ಭಾರತೀಯ ಸಂಪ್ರದಾಯದ ಪ್ರಕಾರ ತುಳಸಿ ಗಿಡ ಒಂದು ಶ್ರೇಷ್ಠವಾದ ಸಸಿ, ಪ್ರತಿಯೊಬ್ಬರು ತುಳಸಿ ಗಿಡವನ್ನು ಮನೆಯ ಮುಂಭಾಗದಲ್ಲಿ ನೆಟ್ಟು ಅದಕ್ಕೆ ಪ್ರತಿದಿನ ಮಹಿಳೆಯರು ಪೂಜೆ ಮಾಡುವ ಈ ತುಳಸಿ ಗಿಡ ಇದೊಂದು ಪವಿತ್ರವಾದ ಸಸಿ.

ಇನ್ನು ಪವಿತ್ರ ತುಳಸಿ ಗಿಡದಲ್ಲಿ ಹಲವಾರು ಔಷಧಿ ಗುಣಗಳಿವೆ.

ತುಳಸಿ ಎಲೆ ಜೊತೆ ಕಡಿಮೆಣಸು ಬೆಲ್ಲ ಮಿಶ್ರಣ ಮಡಿ ಸೇವಿಸುವುದರಿಂದ ಪಿತ್ತ,ಕಫ,ಹೃದ್ರೋಗ ಮತ್ತು ಜ್ವರಗಳಿಗೆ ಒಳ್ಳೇ ಮನೆಮದ್ದಾಗಿದೆ . ಜ್ವರ ಮತ್ತು ಅಸ್ತಮ, ತೊನ್ನ ಇಂತಹ ಕಾಯಿಲೆಗಳಿಗೆ ಇಂಗ್ಲೀಷ್ ಮೆಡಿಸನ್‍ಗಿಂತ ತುಳಸಿ ಎಲೆ ಸೇವನೆ ತುಂಬಾ ಅರೋಗ್ಯಕರ ಅಂತ ಹಿರಿಯರು ಹೇಳ್ತಾರೆ.

ಮನೆಯ ಮುಂದೆ ತುಳಸಿ ಗಿಡವಿದ್ದರೆ ಅದು ನಿಮ್ಮ ಮನೆ ಸುತ್ತ ಮುತ್ತ ಯಾವುದೇ ನೆಗೆಟಿವ್ ಎನರ್ಜಿ ಸುಳಿಯದಂತೆ ನೋಡಿಕೊಳ್ಳುತ್ತದೆ ಅಲ್ಲದೇ ತುಳಸಿ ಗಿಡದ ಗಾಳಿ ಎಲ್ಲಿಯವರೆಗೆ ಹೋಗುತ್ತದೆ ಅಲ್ಲಿಯ ವರೆಗೆ ಯಾವುದೇ ರೋಗಕಾರಕ ಮತ್ತು ಕೀಟಗಳು ಆ ವಲಯದಲ್ಲಿ ಸುಳಿಯುವುದಿಲ್ಲ.

ಪ್ರತಿದಿನ ತುಳಸಿಗೆ ಗೃಹಿಣಿಯರು ಪೂಜೆ ಮಾಡುವುದರಿಂದ ಮನೆಯಲ್ಲಿ ಯಾವುದೇ ಕಿರಿಕಿರಿ ಇರುವುದಿಲ್ಲ ಮತ್ತು ಗೃಹಿಣಿಗೆ ಚಿರಸೌಭಾಗ್ಯ ಇರುತ್ತದೆ ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋ ನಂಬಿಕೆಯು ಕೂಡ ಇದೆ .
ಈ ಎಲ್ಲಾ ಗುಣಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯ ಮುಂದೆ ಇಡುವುದರಿಂದ ನಿಮ್ಮೆಲ್ಲಾ ಕಷ್ಟಗಳಿಗೂ ಒಂದೊಳ್ಳೆ ಮನೆ ಮದ್ದು ಅಂತಾನೇ ಹೇಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top