ಮನೆಯವರು ಮದುವೆ ಮಾಡಿಸದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ..!

ಪೋಷಕರ ಬಳಿ ಮದುವೆ ಮಾಡಿಸಿ ಎಂದು ಕೇಳಿಕೊಂಡಿದ್ದ ಯುವಕನೊಬ್ಬ, ತಮ್ಮ ಪೋಷಕರು ಸ್ವಲ್ಪ ದಿನಗಳು ಕಳಿಯಲಿ ಆ ಮೇಲೆ ಮದುವೆ ಮಾಡಿಸುತ್ತೇವೆ ಅಂತ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಕಾಮರೆಡ್ಡಿ ಗ್ರಾಮದಲ್ಲಿ ನಡೆದಿದೆ.

ನರೇಶ್‌ 22ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ, ಮನೆಯವರ ಬಳಿ ಮದುವೆ ಮಾಡಿಸುವಂತೆ ಕೇಳಿಕೊಂಡಾಗ ಮನೆಯವರು ಸ್ವಲ್ಪ ದಿನಗಳ ನಂತರ ಮದುವೆ ಮಾಡಿಸುವುದಾಗಿ ಎಂದು ಹೇಳಿದ್ದಾರೆ,ಇದರಿಂದ ಮನನೊಂದ ನರೇಶ್‌ ಆರು ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಇನ್ನು ವಿಷ ಕುಡಿದ ವಿಷಯ ತಿಳಿದ ಕೂಡಲೇ ನರೇಶ್‌ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ,ನಂತರ ನಿಜಾಮಾಬಾದ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಂತರ ನರೇಶ್‌ ಆರೋಗ್ಯದಲ್ಲಿ ಮತ್ತಷ್ಟು ಹದಗೆಟ್ಟ ಹಿನ್ನಲೆಯಲ್ಲಿ ಹೈದರಬಾದ್‌ಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು, ಆದ್ರೆ ಮನೆಯವರ ಬಳಿ ಆಸ್ಪತ್ರೆ ವೆಚ್ಚ ಬರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತನನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು, ಆದ್ರೆ ನರೇಶ್‌ ಮನೆಯಲ್ಲಿ ಕೊನೆಯುಸಿರನ್ನು ಎಳೆದಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top