ಮನೆಗೆ ಲೇಟಾಗಿ ಬಂದ ಪತಿ ಮುಖಕ್ಕೆ ಬಿಸಿ ಎಣ್ಣೆ ಸುರಿದ ಪತ್ನಿ

ಬೆಳಗಿನ ಜಾವ ಮಲಗಿದ್ದ ಪತಿಯ ಮುಖಕ್ಕೆ ಪತ್ನಿ ಬಿಸಿ ಎಣ್ಣೆ ಸುರಿದ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಶಿವಕುಮಾರಿ ಎಂಬ ಮಹಿಳೆ ಆರೋಪಿಯಾಗಿದ್ದು, ಆರವಿಂದ ಪತಿಯಾಗಿದ್ದಾನೆ. 4 ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದು, ಆಗಾಗೇ ಇಬ್ಬರ ನಡುವೆ ಜಗಳವಾಗುತ್ತಿತ್ತು, ಇದೀಗ ತನ್ನ ಗಂಡ ಮನೆಗೆ ಲೇಟಾಗಿ ಬಂದಿದ್ದಾನೆ ಎಂಬ ಕಾರಣ ಇಟ್ಟುಕೊಂಡು ಶಿವಕುಮಾರಿ ರಾತ್ರಿ ಜಗಳವಾಡಿದ್ದಾಳೆ. ನಂತರ ಜಗಳವನ್ನು ಮನೆಯವರು ಮಧ್ಯಪ್ರವೇಶಿಸಿ ಬಿಡಿಸಿದ್ದಾರೆ. ಆದ್ರೆ ಪತ್ನಿ ಸುಮ್ಮನಾಗದೆ ಬೆಳಗ್ಗೆ 5 ಗಂಟೆಗೆ ಎದ್ದು ಎಣ್ಣೆಯನ್ನು ಬಿಸಿ ಮಾಡಿ ಮಲಗಿದ್ದ ಗಂಡ ಅರವಿಂದ್ ಮುಖಕ್ಕೆ ಎರಚಿದ್ದಾಳೆ. ಬಿಸಿ ಎಣ್ಣೆ ಮುಖಕ್ಕೆ ಬೀಳುತ್ತಿದ್ದಂತೆ ಗಂಡ ಕಿರುಚಾಡಿದ್ದು, ತಕ್ಷಣ ಮನೆಯವರು ಬಂದು ನೋಡಿದ್ದಾರೆ, ಅರವಿಂದ್ ಮುಖ ಬಿಸಿ ಎಣ್ಣೆಗೆ ಸುಟ್ಟುಹೋಗಿತ್ತು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶಿವಕುಮಾರಿಯ ವಿರುದ್ಧ ಪೊಲೀಸರಿಗೆ ಮನೆಯವರು ದೂರು ನೀಡಿದ್ದಾರೆ. ಇನ್ನು ಪತ್ನಿ ಶಿವಕುಮಾರಿ ಸಿಟ್ಟಿನಿಂದ ಈ ರೀತಿ ಮಾಡಿದ್ದಾಳೆ ಎಂದು ಶಿವಕುಮಾರಿ ಸಹೋದರ ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಸದ್ಯ ಮುಖ ಸುಟ್ಟುಕೊಂಡಿರೋ ಅರವಿಂದ್ ಬುಂದೇಲ್‍ಖಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top