ಮನೆಗೆ ಬೇಗ ಬಾ ಅಂದಿದ್ದಕ್ಕೆ ಯುವಕ ಮಾಡಿದ್ದೇನು.?!

ಆತ್ಮಹತ್ಯೆಗೆ ದೊಡ್ಡ ಕಾರಣ ಬೇಕಾಗಿಲ್ಲ ಚಿಕ್ಕ ಚಿಕ್ಕ ಕಾರಣಕ್ಕೆ ತಮ್ಮ ಜೀವವನ್ನೇ ಕಳೆದುಕೊಳ್ಳೋ ವ್ಯಕ್ತಿಗಳಿದ್ದಾರೆ, ಅಂತಹದ್ದೇ ಒಂದು ಚಿಕ್ಕ ವಿಚಾರಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ, ಮನೆಯಲ್ಲಿ ಪೋಷಕರು ಹೇಳಿದ ಬುದ್ಧಿ ಮಾತಿಗೆ ಮನನೊಂದ 21ವರ್ಷದ ಯುವಕ ಅಜಯ್ ಗಾಯಕ್ ವಾಡ್ , ಬೀದರ್ ನ ಖಾಸಗಿ‌ ಕಾಲೇಜಿನಲ್ಲಿ ಐಟಿಐ ಮಾಡುತ್ತಿದ್ದ. ಮನೆಯವರು ಹೇಳಿದ ಬುದ್ಧಿಮಾತಿಗೆ ಬೇಸರಗೊಂಡು ಬೀದರ್ ನ ಚಿದ್ರಿ ರಿಂಗ್ ರೋಡ್ ಬಳಿ‌ ನೇಣಿಗೆ ಶರಣಾಗಿದ್ದಾನೆ.


ನಿನ್ನೆ ಮನೆಗೆ ರಾತ್ರಿ ತಡವಾಗಿ ಬಂದಿದ್ದರಿಂದ ಅಜಯ್ ಗಾಯಕ್ ವಾಡ್ ಪೋಷಕರು ಕೆಲವು ಬುದ್ಧಿಮಾತುಗಳನ್ನು ಹೇಳಿದ್ದಾರೆ. ಇದರಿಂದ ಮನನೊಂದ ಅಜಯ್ ಮನೆ ಬಿಟ್ಟುಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿಿದೆ. ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top