ಮದ್ಯ ಸೇವಿಸಿ ಅತ್ಯಾಚಾರವೆಸಗಿದ ಅಪ್ರಾಪ್ತ ಹುಡುಗ ಮತ್ತು ಸ್ನೇಹಿತರು..

ಮದ್ಯ ಸೇವಿಸಿ ಅಪ್ರಾಪ್ತ ಯುವಕ ಮತ್ತು ಆತನ ಸ್ನೇಹಿತರು 19 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿರೋ ಘಟನೆ ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಯುವತಿ ತನ್ನ ಸ್ನೇಹಿತರನ್ನು ಭೇಟಿಯಾಗಿ ಮನೆಗೆ ಹಿಂದಿರುಗುವ ವೇಳೆ, ಯುವತಿ ಆಟೋ ಒಂದನ್ನು ಹತ್ತಿದ್ದಾಳೆ. ಯುವತಿ ಆಟೋ ಹತ್ತಿದ ಬಳಿಕ ಅದೇ ಆಟೋಗೆ ಇಬ್ಬರು ಯುವಕರು ಹತ್ತಿದ್ದು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ನಂತರ ಬಲವಂತವಾಗಿ ಆಟೋದಿಂದ ಕೆಳಗಿಳಿಸಿದ್ದಾರೆ. ನಂತರ ತಮ್ಮ ಬೈಕಿನಲ್ಲಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನು ಇದೇ ವೇಳೆ ಅಪ್ರಾಪ್ತ ಯುವಕ ಸಹ ಇವರನ್ನು ಸೇರಿಕೊಂಡಿದ್ದು, ಮೂವರು ಮದ್ಯಪಾನ ಮಾಡಿ ನಂತರ ಆಕೆ ಕುಡಿಸಲು ಪ್ರಯತ್ನಿಸಿದ್ದಾರೆ. ನಂತರ ಅಪ್ರಾಪ್ತ ಯುವಕ ಸೇರಿ ಮೂರು ಜನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತೆ ತನ್ನ ತಾಯಿಯೊಂದಿಗೆ ರಾಚಕೊಂಡ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಕೂಡಲೇ ಪೊಲೀಸರು ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪ್ರಾಪ್ತ ಮೀರ್‌ಪೇಟೆ ಮೂಲದವನಾಗಿದ್ದು, ಉಳಿದ ಇಬ್ಬರು ಬಾಲಾಪುರದವರಾಗಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top