ಮದುವೆ ಪಾರ್ಟಿ ಕೊಡಿಸಲಿಲ್ಲ ಅಂತ ಗೆಳೆಯನನ್ನೇ ಕೊಂಡ ಸ್ನೇಹಿತರು..

ಮದುವೆಯಾದ ಗೆಳೆಯ ಪಾರ್ಟಿ ಕೊಡಿಸಲಿಲ್ಲ ಎಂದು ಸ್ನೇಹಿತನನ್ನ ಗೆಳೆಯರು ಕೊಲೆ ಮಾಡಿರೋ ಘಟನೆ ಉತ್ತಪ್ರದೇಶದ ಅಲಿಗಢ ಜಿಲ್ಲೆಯ ಪಾಲಿಮುಕಿಯಲ್ಲಿ ನಡೆದಿದೆ.

ಬಬ್ಲು ಸೂರ್ಯವಂಶಿ ಕೊಲೆಯಾದ ವ್ಯಕ್ತಿ, ವ್ಯಾಪಾರಿಯಾಗಿರೋ ಬಬ್ಲು ಮದುವೆಯಾಗಿ ಹೆಣ್ಣನ್ನು ಮನೆಗೆ ಕರೆದುಕೊಂಡು ಬಂದಿದ್ದ, ಮದುವೆಯಾದ ಮಾರನೇಯದಿನ ಬಬ್ಲು ಗೆಳೆಯನ ಮನೆಗೆ ತೆರಳಿದ್ದಾನೆ. ಈ ವೇಳೆ ನಾಲ್ವರು ಗೆಳೆಯರು ಮದುವೆಯಾದ ಖುಷಿಗೆ ಮದ್ಯದ ಪಾರ್ಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದ್ರೆ ಬಬ್ಲು ಮದ್ಯದ ಪಾರ್ಟಿ ನೀಡಲು ಒಪ್ಪಿರಲಿಲ್ಲ, ಇದರಿಂದ ಜಗಳಕ್ಕೆ ಇಳಿದ ಸ್ನೇಹಿತರು ಬಬ್ಲುವನ್ನು ಹಿಡಿದು ಚಾಕುವಿನಿಂದ ಕತ್ತು ಕೂಯ್ದು ಎಸ್ಕೇಪ್‌ ಆಗಿದ್ದಾರೆ. ನಂತರ ಬಬ್ಲು ಮನೆಯವರಿಗೆ ಫೋನ್‌ ಮಾಡಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.

ಇನ್ನು 7 ವರ್ಷಗಳ ಹಿಂದೆ ಬಬ್ಲು ವಿವಾಹವಾಗಿದ್ದು, ಎರಡು ಮಕ್ಕಳು ಸಹ ಇದ್ದರು, ಇದು ಎರಡನೇ ಮದುವೆಯಾಗಿದ್ದು, ತನ್ನ ಹೆಂಡತಿ ಕೆಲವು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದುದ್ದರಿಂದ ತನ್ನ ತಂಗಿಯನ್ನೇ ಗಂಡನಿಗೆ ಮದುವೆ ಮಾಡಿಸಿ ಕರೆತಂದಿದ್ದಳು.

ಬಬ್ಲು ಕೊಲೆಯಾಗಿರೋ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ, ಎಸ್ಕೇಪ್‌ ಆಗಿದ್ದ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top