ಮದುವೆಯಾದ 3ದಿನಕ್ಕೆ ತವರು ಮನೆಗೆ ಕಳುಹಿಸಿ 8ನೇ ದಿನಕ್ಕೆ ತಲಾಖ್‌ ಹೇಳಿದ ಗಂಡ..!

ಮದುವೆಯಾದ ಮೂರೇ ದಿನಕ್ಕೆ ಹೆಂಡತಿಯನ್ನು ಮನೆಗೆ ಕಳುಹಿಸಿ ನಂತರ ಎಂಟನೇ ದಿನಕ್ಕೆ ಹೆಂಡತಿ ಮನೆಗೆ ಹೋಗಿ ತಲಾಖ್‌..ತಲಾಖ್‌..ತಲಾಖ್‌..ಅಂತ ಹೇಳಿ ವಿಚ್ಛೇದನ ನೀಡಿರೋ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಬನಂ ಎಂಬ ಮಹಿಳೆ ಆಗಸ್ಟ್‌ ೧೦ ನೇ ತಾರಿಖು ಸದ್ದಾಂ ಎಂಬುವವನನ್ನು ವಿವಾಹವಾಗಿದ್ದು, ಸದ್ದಾಂ ಮದುವೆಯಾದ ಮೂರೇ ದಿನಕ್ಕೆ ಹೆಂಡತಿಯನ್ನು ತನ್ನ ತವರು ಮನೆಯಿಂದ ವರದಕ್ಷಿಣೆಯನ್ನು ತರುವಂತೆ ವಾಪಾಸ್‌ ಕಳುಹಿಸಿದ್ದಾನೆ. ಶಬನಂ ಮನೆಯವರು ಹಣವನ್ನು ನೀಡದೆ ಇದುದ್ದರಿಂದ ಸದ್ದಾಂ ಮದುವೆಯಾದ ಎಂಟನೇ ದಿನಕ್ಕೆ ಹೆಂಡತಿ ಮನೆಗೆ ಹೋಗಿ ತಲಾಖ್‌..ತಲಾಖ್‌..ತಲಾಖ್‌ ಎಂದು ಹೇಳಿ ಬಂದಿದ್ದಾನೆ. ಸದ್ದಾಂ ಶಬನಂ ಜೊತೆ ಮದುವೆಯಾಗುವ ವೇಳೆ ಶಬನಂ ಮನೆಯವರು ಸದ್ದಾಂಗೆ ಬೈಕ್‌ ನೀಡಿದ್ದರು, ಆದ್ರೆ ಸದ್ದಾಂ ಇನ್ನಷ್ಟು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದು ೫ ಲಕ್ಷ ರೂಪಾಯಿ ಮತ್ತು ಕಾರಿಗೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ಶಬನಂ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸದ್ದಾಂ ಶಬನಂ ಮನೆಗೆ ಹೋಗಿ ತಲಾಖ್‌ ಹೇಳದ್ದಾನೆ. ಇನ್ನು ಮಹಿಳೆಯ ತಂದೆ ದೂರಿನನ್ವಯ ಸದ್ದಾಂ ಸೇರಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top