ಮದುವೆಯಾದ 2ನೇ ವಾರಕ್ಕೆ ಗಂಡನ ವಿರುದ್ಧ ದೂರು ನೀಡಿದ ಪೂನಂ ಪಾಂಡೆ..

ಇನ್ನು ಮದುವೆಯಾಗಿ ಎರಡುವಾರವಾಗಿಲ್ಲ ಆಗಲೇ ಗಂಡನ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ ಬಾಲಿವುಡ್‌ ಹಾಟ್‌ ಬ್ಯೂಟಿ ಪೂನಂ ಪಾಂಡೆ.

ಸೆಪ್ಟೆಂಬರ್‌ ೧೧ರಂದು ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್‌ ಬಾಂಬೆಯನ್ನು ಮದುವೆಯಾಗಿದ್ದಳು . ಈಗ ಅದೇ ಸ್ಯಾಮ್‌ ಬಾಂಬೆ ನನಗೆ ಕಿರುಕುಳ ನೀಡುತ್ತಿದ್ದಾನೆ. ಹಲ್ಲೆ ಮಾಡುತ್ತಿದ್ದಾನೆ ಎಂದಯ ಗೋವಾ ಪೊಲೀಸರಿಗೆ ಸೋಮವಾರ ದೂರು ನೀಡಿದ್ದಾಳೆ.

ಗೋವಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಚಿತ್ರೀಕರಣ ನಡೆಯುತ್ತಿರೋ ಸ್ಥಳಕ್ಕೆ ಬಂದು ಸ್ಯಾಮ್‌ ಬಾಂಬೆ, ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿ ಹಾಕಿದ್ದಾನೆ ಎಂದು ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಪೂನಂ ಪಾಂಡೆ ಪತಿ ಸ್ಯಾಮ್‌ ಬಾಂಬೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top