ಮದುವೆಯಾಗ ಬೇಕಾಗಿದ್ದ ಜೋಡಿಯನ್ನು ಗುಂಡಿಟ್ಟು ಕೊಂದ್ರು..

ಮದುವೆಯಾಗಲು ತಯಾರಿ ನಡೆಸುತ್ತಿದ್ದ ಇಬ್ಬರು ಜೋಡಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

25 ವರ್ಷದ ಯುವಕ ಮತ್ತು 27 ವರ್ಷದ ಯುವತಿ ಕೊಲೆಯಾದ ಜೋಡಿ, ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು, ಹುಡುಗಿ ಹುಡಗನಿಗಿಂತ ಎರಡು ವರ್ಷ ದೊಡ್ಡವಳಾಗಿದ್ದರಿಂದಾಗಿ ಹುಡುಗಿಯ ಮನೆಯಲ್ಲಿ ವಿರೋಧ ಕೂಡ ವ್ಯಕ್ತವಾಗಿತ್ತು, ಅದೆಲ್ಲವನ್ನೂ ದಾಟಿ ಎರಡು ಮನೆಯವರನ್ನು ಒಪ್ಪಿಸಿ ಈ ಜೋಡಿ ಮದುವೆಗೆ ಸಿದ್ಧತೆಯನ್ನು ಮಾಡಿಕೊಂಡಿತದ್ದರು. ಯುವತಿಯನ್ನು ಭೇಟಿಯಾಗು ಯುವಕ ತನ್ನ ಸಹೋದರನೊಂದಿದೆ ಮಹರ್ಷಿ ಯುನಿವರ್ಸಿಟಿ ಬಳಿ ಹೋದ ವೇಳೆ ಇಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಈ ಘಟನೆ ವೇಳೆ ಸಹೋದರನಿಗೂ ಸಹ ಗಭೀರವಾಗಿ ಗಾಯಗಳಾಗಿದ್ದು, ಇಬ್ಬರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಸಹೋದರ ಹೇಳಿದ್ದಾನೆ.

ಇನ್ನು ಮೊದಲಿನಿಂದಲೂ ಹುಡುಗಿ ಮನೆಯವರಿಗೆ ಈ ಮದುವೆ ವಿಚಾರದಲ್ಲಿ ವಿರೋಧವಿತ್ತು, ಅವರೇ ಈ ಕೃತ್ಯವನ್ನು ಮಾಡಿಸಿದ್ದಾರೆ ಎಂದು ಹುಡುಗನ ಮನೆಯವರು ಯುವತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top