
ವರ ಮತ್ತು ಆತನ ಸಂಬಂಧಿಕರು ಮೆರವಣಿಗೆ ಮೂಲಕ ವಧುವಿನ ಊರಿಗೆ ಆಗಮಿಸಿ ರಾತ್ರಿ ಇಡೀ ಹುಡುಕಾಡಿದ್ರೂ ಮದುಮಗಳ ಮನೆ ಸಿಗದೇ ವರನ ಕಡೆಯವರು ಸಿಟ್ಟಾಗಿ ವಾಪಾಸ್ ಹೋಗುವುದರ ಜೊತೆಯಲ್ಲಿ ಮದುವೆ ದಲ್ಲಾಳಿಯನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡ ಘಟನೆ ಉತ್ತರ ಪ್ರದೇಶದ ಕೊತ್ವಾಲಿ ಪಟ್ಟಣದ ಕಾನ್ಶೀರಾಮ್ನಲ್ಲಿ ನಡೆದಿದೆ. ವರ ಕಾನ್ಶೀರಾಮ್ ನಿವಾಸಿ, ವಧು ರಾಣಿಪುರದ ನಿವಾಸಿ, ಡಿ. 11ಕ್ಕೆ ಮದುವೆ ನಿಶ್ಚಯವಾಗಿದ್ದು, ವರನ ಕಡೆಯವರು ವಧುವನಿ ಊರಿಗೆ ಡಿ 10ರಂದು ಮೆರವಣಿಗೆ ಮೂಲಕ ಹೊರಟಿದ್ದು, ರಾತ್ರಿ ವಧುವಿನ ಊರು ತಲುಪಿ ಮನೆ ಹುಡುಕಾಟ ನಡೆಸಿದ್ರೆ ವಧುವಿನ ಮನೆ ಸಿಗದೇ ಸಿಟ್ಟಾದ ವರನ ಕಡೆಯವರು ಮದುವೆ ದಲ್ಲಾಳಿಯನ್ನು ಮನೆಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.
ವರ ಬಿಹಾರದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಆಕೆಯ ಜೊತೆ ಮದುವೆಯಾದ ಮೇಲೆ ಸ್ವಲ್ಪ ದಿನದಲ್ಲೇ ಆಕೆಯ ಜೊತೆ ಸಂಬಂಧವನ್ನು ಕಡಿತಗೊಳಿಸಿದ್ದಾನೆ. ನಂತರ ನರೋಲಿಯಲ್ಲಿ ಅಂಗಡಿಯ ಬಳಿ ಎರಡನೇ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದು, ಇದಕ್ಕೆ ಮಹಿಳೆ ಮದುವೆ ದಲ್ಲಾಳಿಯಾಗಿದ್ದಳು, ಅಲ್ಲೇ ತಕ್ಷಣ ಮದುವೆ ದಿನಾಂಕ ಮತ್ತು ಸ್ಥಳವನ್ನು ನಿಗದಿ ಮಾಡಿ ವಧುವಿನ ಕಡೆಯವರಿಗೆ ಮದುವೆ ಖರ್ಚಿಗೆ ಎಂದು 20000 ರೂಪಾಯಿ ಪಡೆದುಕೊಂಡಿದ್ರು, ಆದ್ರೆ ವರನ ಕಡೆಯವರು ಯಾರು ವದುವಿನ ಮನೆಗೆ ಹೋಗಿರಿಲ್ಲ, ವಧು ಹೇಗಿದ್ದಾಳೆ ಅಂತಾನೂ ನೋಡಿರಲಿಲ್ಲ, ಮೆರವಣಿಗೆ ಮೂಲಕ ಮದುವೆಗೆ ವಧುವಿನ ಊರಿಗೆ ಬಂದಗಾ ಅಡ್ರೆಸ್ ಇಲ್ಲದಾಗ , ಮಹಿಳಾ ದಲ್ಲಾಳಿಯನ್ನು ಒತ್ತೆಯಾಳುವಾಗಿ ಇರಿಸಿಕೊಂಡು ಗದ್ದಲ ಮಾಡಿದ್ದರು, ತಕ್ಷಣ ಪೊಲೀಸರು ಮಧ್ಯಪ್ರವೇಶ ಮಾಡಿ ಮಹಿಳೆಯನ್ನು ಬಜಾವ್ ಮಾಡಿದ್ದಾರೆ.