ಮದುವೆಗೆ ಕೆಲವೇ ಗಂಟೆ ಇರುವಾಗ ವರ ನಾಪತ್ತೆ..! ವಧುವಿನ ಮನೆಯವರಲ್ಲಿ ಕಣ್ಣೀರು..!

ಇನ್ನೇನೂ ಹಸೆಮಣೆ ಏರಲು ಕೆಲವೇ ಗಂಟೆಗಳು ಇರುವ ಸಮಯದಲ್ಲಿ ವರ ನಾಪತ್ತೆ ಆಗಿರೋ ಘಟನೆಯೊಂದು ಚಿಕ್ಕೋಡಿಯ ಸಂಕೇಶ್ವರ ಪಟ್ಟದಲ್ಲಿ ನಡೆದಿದೆ.
ಇಂದು ಪಟ್ಟಣದ ಸಾಯಿ ಕಾರ್ಯಾಲಯದಲ್ಲಿ ಮಹಾರಾಷ್ಟ್ರದ ಯುವತಿ ಜೊತೆ ಮದುವೆಯಾಗಬೇಕಿದ್ದ ಸುನೀಲ್‌ ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾನೆ. ಬುಧವಾರ ಸಂಜೆಯ ವರೆಗೂ ಮನೆಯವರ ಜೊತೆಗೆ ಇದ್ದ ಸುನೀಲ್‌ ಇಂದು ಬೆಳಗ್ಗೆಯಿಂದ ತನ್ನ ಮೊಬೈಲ್‌ ಆಫ್‌ ಮಾಡಿಕೊಂಡಿದ್ದಾನೆ. ಇಂದು ಬೆಳಗ್ಗೆ ಸುನೀಲ್‌ಗೆ ಅರಿಶಿನ ಕಾರ್ಯಕ್ಕೆ ಕುಟುಂಬಸ್ಥರು ಹುಡುಕುತ್ತಿದ್ದಾಗ ಸುನೀಲ್‌ ನಾಪತ್ತೆಯಾಗಿರುವ ವಿಚಾರ ಗೊತ್ತಾಗಿದೆ. ಮಧ್ಯಾಹ್ನ 12.30ಕ್ಕೆ ಮದುವೆ ಮುಹೂರ್ತ ನಿಗದಿಯಾಗಿದ್ದು. ವರ ನಾಪತ್ತೆಯಾಗಿರುವ ವಿಚಾರ ತಿಳಿದು ಮದುವೆಗೆ ಬಂದವರಲ್ಲಿ ಆತಂಕ ಉಂಟಾಗಿದೆ. ಇನ್ನು ಸುನೀಲ್‌ ಕನ್ನಡ ಪರ ಸಂಘಟನೆಯಲ್ಲಿ ತಾಲೂಕು ಅಧ್ಯಕ್ಷನಾಗಿದ್ದು. ಈಗ ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ.ಇನ್ನು ಈ ವಿಚಾರ ತಿಳಿದ ವಧುವಿನ ಕುಟುಂಬಂಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top