ಮತ್ತೆ ಸಿಕ್ಸರ್ ಸಿಡಿಸಲು ಯುವರಾಜ್ ತಯಾರಿ,7 ವರ್ಷ ನಿಷೇಧದ ಬಳಿಕ ಶ್ರೀಶಾಂತ್ ಕ್ರಿಕೆಟ್‍ಗೆ ಎಂಟ್ರಿ

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮತ್ತೆ ಮೈದಾನದಲ್ಲಿ ಧೂಳೇಬ್ಬಿಸಲು ಬರುತ್ತಿದ್ದಾರೆ. ಹೌದು ಜನವರಿಯಿಂದ ಶುರುವಾಗಲಿರೋ ದೇಶೀ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳಲು ತಯಾರಿಯನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದ ಯುವರಾಜ್ ಸಿಂಗ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‍ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ, ಇದೀಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪಂಜಾಬ್ ಪ್ರಕಟಿಸಿರೋ ಸಂಭಾವ್ಯ 30ರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಹೆಸರು ಕೂಡ ಇದ್ದು, ಮುಂದಿನ ದೇಶೀ ಕ್ರಿಕೆಟ್‍ನಲ್ಲಿ ಆಡಲು ಮತ್ತೆ ಮರಳುತ್ತಿದ್ದಾರೆ. ಆದ್ರೆ ಯುವರಾಜ್ ಸಿಂಗ್ ಮತ್ತೆ ಕಣದಲ್ಲಿ ಕಾಣಿಸಿಕೊಳ್ಳಬೇಕು ಅಂದ್ರೆ ಬಿಸಿಸಿಐ ಅನುಮತಿ ಅಗತ್ಯವಿದೆ. ಹೌದು ಯುವರಾಜ್ ಸಿಂಗ್ ಕ್ರಿಕೆಟ್‍ಗೆ ನಿವೃತ್ತಿ ಹೊಂದಿದ ಮೇಲೆ ಪಂಜಾಬ್ ಕ್ರಿಕೆಟ್ ಬೋರ್ಡ್ ಯುವರಾಜ್ ಬಳಿ ಮನವಿಯನ್ನು ಮಾಡಿಕೊಂಡಿತ್ತು, ನಿವೃತ್ತಿ ವಾಪಾಸ್ ಪಡೆದು ಪಂಜಾಬ್ ಪರ ಕಣಕ್ಕಿಳಿಯಲು ಮನವಿಮಾಡಿತ್ತು, ಇನ್ನು ಯುವರಾಜ್ ಕೂಡ ನಿವೃತ್ತಿ ವಾಪಾಸ್ ಪಡೆದು ದೇಶೀ ಕ್ರಿಕೆಟ್‍ನಲ್ಲಿ ಆಡಲು ಅನುಮತಿ ಕೋರಿ ಬಿಸಿಸಿಐಗೆ ಯುವರಾಜ್ ಪತ್ರವನ್ನು ಬರೆದಿದ್ದು, ಈ ಬಗ್ಗೆ ಇತ್ತಿಚೆಗೆ ಸಂದರ್ಶನದ ವೇಳೆ ಹೇಳಿಕೊಂಡಿದ್ದರು. ಬಿಸಿಸಿಐಊ ಅನುಮತಿ ನೀಡಿದರೆ ಪಂಜಾಬ್ ಪರ ಆಡುತ್ತೇನೆ ಎಂದು ಹೇಳಿದ್ರು, ಆದ್ರೆ ನಿವೃತ್ತಿ ನಂತರ ಯುವಿ ಹಲವು ವಿದೇಶಿ ಲೀಗ್‍ನಲ್ಲಿ ಪಾಲ್ಗೊಂಡಿದ್ದು, ಬಿಸಿಸಿಐ ನಿಯಮದ ಪ್ರಕಾರ ಆಟಗಾರ ದೇಶೀ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ನಂತರವಷ್ಟೇ ವಿದೇಶಿ ಲೀಗ್‍ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಲಿದೆ, ಇದೀಗ ಯುವರಾಜ್ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಕಾದುನೋಡಬೇಕು. ಇನ್ನು ಈಗಾಗಲೇ ಯುವರಾಜ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಭರ್ಜರಿ ಪ್ರ್ಯಾಕ್ಟಿಸ್ ಮಾಡುತ್ತಿದ್ದು, ತಮ್ಮ ಹುಟ್ಟುಹಬ್ಬದ ದಿನವೂ ನೆಟ್‍ನಲ್ಲಿ ಸಖತ್ ವರ್ಕೌಟ್ ಮಾಡಿದ್ದರು. ಇದೀಗ ಪಂಜಾಬ್ ಪರ ಆಡಲು ಬಿಸಿಸಿಐ ಅನುಮತಿಗಾಗಿ ಯುವರಾಜ್ ಕಾಯುತ್ತಿದ್ದಾರೆ.

7 ವರ್ಷ ನಿಷೇಧದ ಬಳಿಕ ಶ್ರೀಶಾಂತ್ ಕ್ರಿಕೆಟ್‍ಗೆ ಎಂಟ್ರಿ

ಇನ್ನು ಯುವರಾಜ್ ರೀತಿಯಲ್ಲಿ ಕೇರಳದ ವೇಗಿ ಶ್ರೀಶಾಂತ್ ಕೂಡ ದೇಶೀ ಕ್ರಿಕೆಟ್‍ಗೆ ಮರಳುತ್ತಿದ್ದಾರೆ. ಐಪಿಎಲ್ ಫಿಕ್ಸಿಂಗ್‍ನಿಂದಾಗಿ ಕ್ರಿಕೆಟ್‍ನಿಂದ 7ವರ್ಷ ನಿಷೇಧ ಕಳೆದ ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾಗಿದ್ದು, ಈಗಾಗಲೇ ರೀ ಎಂಟ್ರಿಗಾಗಿ ಶ್ರೀಶಾಂತ್ ಭರ್ಜರಿ ತಯಾರಿಯನ್ನು ನಡೆಸುತ್ತಿದ್ದರು, ಇದೀಗ ಜನವರಿ 10ರಿಂದ ನಡೆಯಲಿರೋ ಸಯ್ಯದ್ ಮುಷ್ತಕ್ ಅಲಿ ಟ್ರೋಫಿಗೆ ಕೇರಳ ಪ್ರಕಟಿಸಿರೋ 30 ಸಂಭಾವ್ಯರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರಿದ್ದು, ದೇಶೀ ಕ್ರಿಕೆಟ್‍ಗೆ ಮರಳುವ ತವಕದಲ್ಲಿದ್ದಾರೆ. ಇನ್ನು ಮುಂದಿನ ವರ್ಷದ ಐಪಿಎಲ್‍ನಲ್ಲೂ ಮತ್ತು ಟಿ 20 ವಿಶ್ವಕಪ್‍ನಲ್ಲೂ ಆಡುವ ಗುರಿಯನ್ನು ಶ್ರೀಶಾಂತ್ ಇಟ್ಟುಕೊಂಡಿದ್ದಾರೆ.

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಕನ್ನಡಿಗ ಕೆಎಲ್ ರಾಹುಲ್

ಟೀಂ ಇಂಡಿಯಾದ ಉಪನಾಯಕ, ಕನ್ನಡಿಗ ಕೆ ಎಲ್ ರಾಹುಲ್ ಕ್ರಿಕೆಟ್ ಪ್ರಿಯರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಧನ್ಯವಾದವನ್ನು ಹೇಳಿದ್ದಾರೆ. ಹೌದು ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಕೆ ಎಲ್ ರಾಹುಲ್ ಟೆಸ್ಟ್ ಸರಣಿಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸದ್ಯ ಟಿ 20 ರ್ಯಾಂಕಿಂಗ್‍ನಲ್ಲಿ ಮೂರನೇ ಸ್ಥಾನದಲ್ಲರೋ ರಾಹುಲ್ ಇದೀಗ ಸೋಶಿಯಲ್ ಮಿಡಿಯಾದಲ್ಲೂ ಭರ್ಜರಿ ಫಾರ್ಮ್‍ನಲ್ಲಿ ಇದ್ದಾರೆ. ಹೌದು ಟ್ವೀಟರ್‍ನಲ್ಲಿ 5 ಮಿಲಿಯನ್ ಫಾಲೋವರ್ಸ್ ಹೊಂದಿದ್ದು ಅಂದರೆ 50 ಲಕ್ಷ ಫಾಲೋವರ್ಸ್ ಅನ್ನು ಟ್ವೀಟರ್‍ನಲ್ಲಿ ಕೆ ಎಲ್ ರಾಹುಲ್ ಹೊಂದಿದ್ದು ಆ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ರಾಹುಲ್ ಟ್ವೀಟ್ ಮಾಡಿದ್ದು `ನಿಮ್ಮ ಬೆಂಬಲದಿಂದ ಈ ಜರ್ನಿ ವಿಶೇಷವಾಗಿದೆ, ಎಲ್ಲಾ ಟೈಂನಲ್ಲೂ ಜೊತೆಯಾಗಿದ್ದೀರಿ, ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞನಾಗಿದ್ದೇನೆ ಎಂದು ರಾಹುಲ್ ಬರೆದುಕೊಂಡಿದ್ದಾರೆ. ಇನ್ನು ಇನ್ಸ್ಟಾಗ್ರಾಂನಲ್ಲೂ ರಾಹುಲ್ ಆಕ್ಟಿವ್ ಆಗಿದ್ದು ರಾಹುಲ್ 8 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದು ಟ್ವೀಟರ್ ಮತ್ತು ಇನ್ಸ್ಟ್ರಾಗ್ರಾಂ ಮೂಲಕ ರಾಹುಲ್ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಾರೆ.

ಯುವರಾಜ್ ಸಿಂಗ್ ಮತ್ತು ಶ್ರೀಶಾಂತ್ ಅವರ ರೀ ಎಂಟ್ರಿ ಬಗ್ಗೆ ನಿಮ್ಮ ಅನಿಸಿಕೆ ಏನೂ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top