ಮತ್ತೆ ಬಾಯಿಗೆ ಬರ್ಸಿ ಗೆದ್ರು ನಮ್ ಹುಡುಗ್ರು.. ಎಬಿಡಿ ನೀನ್ ಸೂಪರ್

ಹೈವೋಲ್ಟಾಜ್ ಮ್ಯಾಚ್‍ನಲ್ಲಿ ಆರ್‍ಸಿಬಿ ಆರ್ ಆರ್ ವಿರುದ್ಧ ಭರ್ಜರಿಯಾಗಿ ಜಯಭೇರಿ ಬಾರಿಸಿದೆ. ಮತ್ತೊಮ್ಮೆ ಆರ್‍ಸಿಬಿಗೆ ನಾನೇ ಅಪತ್ಭಾಧವ ಅನ್ನೋದನ್ನ ಎಬಿಡಿ ಮತ್ತೆ ಸಾಭೀತು ಪಡಿಸಿದ್ದಾರೆ. ಹೌದು ಆರ್ ಆರ್ ನೀಡಿದ್ದ 178 ರನ್‍ಗಳ ಗುರಿಯನ್ನು ಬೆನ್ನತ್ತಿದ ಆರ್‍ಸಿಬಿ ಆರಂಭದಲ್ಲಿ ಫಿಂಚ್ ವಿಕೆಟ್ ಬೇಗನೇ ಕಳೆದುಕೊಂಡಿತು, ಇನ್ನು ವಿರಾಟ್ ಪಡಿಕಲ್ ಜೊತೆಯಾಟ ಉತ್ತಮವಾಗಿದ್ರು, ನಿಧಾನಗತಿಯ ರನ್‍ನಿಂದಾಗಿ ತಂಡ ಗೆಲುವಿನ ಗುರಿಯನ್ನು ತಲುಪಲು ಕಷ್ಟವಾಗತೊಡಗಿತು.

ಈ ವೇಳೆ ದೇವದತ್ ಪಡಿಕಲ್ ಮತ್ತು ವಿರಾಟ್ ಕಳೆದುಕೊಂಡ ವೇಳೆ ಕ್ರೀಸ್‍ಗೆ ಬಂದ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಮತ್ತೊಮ್ಮೆ ತಂಡಕ್ಕೆ ನಾನು ಅಪತ್ಭಾಂದವ ಅನ್ನೋದನ್ನ ಸಾಭೀತು ಪಡಿಸಿದ್ದಾರೆ. 12 ಬಾಳ್‍ಗೆ 38ರನ್ ಬೇಕಾದ ವೇಳೆ 19ನೇ ಓವರ್‍ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆಯು ಮೂಲಕ ಆರ್‍ಸಿಬಿ ಗೆಲುವಿನ ದಡಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾದ್ರು. 22 ಬಾಲ್‍ಗಳಲ್ಲಿ 55ರನ್‍ಗಳನ್ನು ಸಿಡಿಸೋ ಮೂಲಕ ಎಬಿಡಿ ಈ ಪಂದ್ಯದ ಸೂಪರ್ ಹೀರೋ ಆಗಿ ಹೊರಹೊಮ್ಮಿದ್ರು, ಇನ್ನು ಇದುವರೆಗೂ ಎಬಿಡಿ ಆರ್‍ಸಿಬಿ ಪರ 19 ಬಾರಿ ನಾಟ್‍ಔಟ್ ಆಗಿ ಉಳಿದಿದ್ದು, ಅದರಲ್ಲಿ 18 ಬಾರಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸೋ ಮೂಲಕ ಆರ್‍ಸಿಬಿಯ ಸೂಪರ್ ಹೀರೋ ಆಗಿದ್ದಾರೆ.

ಇದೀಗ ಇಂದಿನ ಪಂದ್ಯದಲ್ಲಿ ಮತ್ತೆ ಸಾಭೀತು ಮಾಡಿದ್ದು , ಆರ್‍ಸಿಬಿ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ದಾರೆ. ಒಟ್ಟಿನಲ್ಲಿ ಪಂದ್ಯ ಕೈ ತಪ್ಪಿ ಹೋಯಿತು ಅನ್ನೋವಾಗ ಅದ್ಭುತ ಪ್ರದರ್ಶನ ನೀಡೋ ಮೂಲಕ ತಂಡವನ್ನು ಗೆಲ್ಲಿಸಿ ಕೊಡೋ ಮೂಲಕ ಕ್ರಿಕೆಟ್‍ನಲ್ಲಿ ಮೇ ಹೂ ಡಾನ್ ಅನ್ನೋದನ್ನ ಸಾಭೀತು ಪಡಿಸಿದ್ದಾರೆ. ಇನ್ನು ಎಬಿಡಿ ಈ ಪಂದ್ಯದಲ್ಲಿ ಅದ್ಭುತ ಆಟ ಆಡೋ ಮೂಲಕ ಆರ್‍ಸಿಬಿ ಅಭಿಮಾನಿಗಳ ಮನಗೆದ್ದಿದ್ದು, ಹರ್ಷ ಬೋಗ್ಲೆ ಹೇಳಿದ ರೀತಿ ಎಬಿಡಿ ಎಲ್ಲಿಯವರು ಅಂದ್ರೆ ಅವ್ರು ನಮ್ಮ ಬೆಂಗಳೂರಿನವ್ರೆ ಅಂತ ನಾವು ಇವತ್ತು ಇನ್ನು ಜೋಶ್ ಆಗೆ ಹೇಳಬಹುದು

ಎಬಿಡಿಯ ಇವತ್ತಿನ ಅದ್ಭುತ ಆಟದ ಬಗ್ಗೆ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top