ಮತ್ತೆ ನಗೆಪಾಟಲಿಗೆ ಗುರಿಯಾದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌..!

ಪಾಕ್‌ ಪ್ರಧಾನಿ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ವಿಶ್ವದ ಎದುರು ನಗೆಪಾಟಲಿಗೆ ಈಡಾಗುತ್ತಿರೋದು ಹೊಸತೆನಲ್ಲಾ..ಒಂದೊಂದೆ ಯಡವಟ್ಟು ಹೇಳಿಕೆಗಳಿಂದ ನಗೆಪಾಟಲಿಗೀಡಾಗುತ್ತಿದ್ದಾರೆ. ಇತ್ತಿಚೆಗೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಇಮ್ರಾನ್‌ ಖಾನ್‌ ಹೇಳಿದ ಆ ಒಂದು ಮಾತು ಈಗ ಎಲ್ಲರ ಪಾಲಿಗೆ ಹಾಸ್ಯದ ಅಂಶವಾಗಿದೆ. ಮರಗಳು ರಾತ್ರಿ ವೇಳೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಅನ್ನೋ ಮೂಲಕ ಈಗ ನೆಟ್ಟಿಗರ ನಗೆಪಾಟಲಿಗೆ ಇಡಾಗಿದ್ದಾರೆ. ಮರಗಳು ಪ್ರತಿಕ್ಷಣ ಆಮ್ಲಜನಕ ಬಿಡುಗಡೆ ಮಾಡುತ್ತವೆ ಅನ್ನೋದು ಸಾಮಾನ್ಯ ಜ್ಞಾನ ಆದ್ರೆ ಪಾಕ್‌ ಪ್ರಧಾನಿ ಈಗ ಹೇಳಿರೋ ಈ ಹೇಳಿಕೆಗೆ ಈಗ ಮತ್ತೆ ಇಮ್ರಾನ್‌ ಖಾನ್‌ ಎಲ್ಲರ ಬಾಯಿಯ ಆಹಾರವಾಗಿ ಹೋಗಿದ್ದಾರೆ. ಸದ್ಯ ಇಮ್ರಾನ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಈ ವಿಡಿಯೋವನ್ನು ಪಾಕ್‌ ಪತ್ರಕರ್ತೆ ನೈಲಾ ಇನಾಯತ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು,

ಈ ವಿಡಿಯೋವನ್ನು ನೋಡಿದವರು ಲೇವಡಿ ಮಾಡುತ್ತಿದ್ದರೆ ಇನ್ನೊಂದು ಕಡೆ ಪಾಕ್‌ ಪ್ರಧಾನಿಗೆ ನೋಬೆಲ್‌ ಪ್ರಶಸ್ತಿ ನೀಡಿ ಗೌರವಿಸಿ ಎಂದು ತಮಾಷೆ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top