ಮಗುವಿಗೆ ಬಳ್ಳಾರಿ ಜಿಲ್ಲಾಧಿಕಾರಿ ಹೆಸರು ಇಟ್ಟ ದಂಪತಿ..

ದಂಪತಿಗಳು ಹುಟ್ಟಿದ ಮಗುವಿಗೆ ಬಳ್ಳಾರಿ ಜಿಲ್ಲಾಧಿಕಾರಿಯ ಹೆಸರಿಡುವ ಮೂಲಕ ಬಳ್ಳಾರಿ ಡಿಸಿಗೆ ವಿಶೇಷವಾಗಿ ಅಭಿನಂದಿಸಿದ್ದಾರೆ.

ಕೊರೋನಾ ಸೋಂಕಿತ ಗರ್ಭಿಣಿ ದಾವಣಗೆರೆಯ ಗಂಡನ ಮನೆಯಿಂದ ಬಳ್ಳಾರಿಗೆ ಹೆರಿಗೆಗೆ ಬಂದಿದ್ದಾರೆ. ಈ ವೇಳೆ ಕೋವಿಡ್‌ ಪರೀಕ್ಷೆ ನಡೆಸಿದಾಗ ಗರ್ಭೀಣಿಗೆ ಸೋಂಕು ದೃಢಪಟ್ಟಿತ್ತು, ಕೋವಿಡ್‌ ಕೇಂದ್ರದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿತ್ತು, ಜೊತೆಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ನಂತರ ಗುಣಮುಖರಾಗಿ ಹೊರ ಬರುತ್ತಿದ್ದಂತೆ ದಂಪತಿಯ ಕುಶಲೋಪರಿಯನ್ನು ಜಿಲ್ಲಾಧಿಕಾರಿ ನಕುಲ್‌ ವಿಚಾರಿಸಿದ್ದಾರೆ.

ಅವರ ಕಾಳಜಿ,ಕರ್ತವ್ಯ, ಸರಳತೆ ಅಭಿಮಾನಿಗಳಾದ ದಂಪತಿಗಳು ಮಗುವಿಗೆ ಡಿಸಿ ನಕುಲ್‌ ಅವರ ಹೆಸರು ಇಡಲು ನಿರ್ಧರಿಸಿದ್ರು, ಎರಡು ತಿಂಗಳ ನಂತರ ಮಗುವಿಗೆ ನಕುಲ್‌ ಎಂದು ನಾಮಕರಣ ಮಾಡಿದ್ದಾರೆ. ಈ ವಿಷಯ ತಿಳಿದ ಡಿಸಿ ನಕುಲ್‌ ಅವರು , ಆಶ್ಚರ್ಯವಾಗಿದೆ,ಜೊತೆಗೆ ಸಂತಸ ವಾಗುತ್ತೆ, ಇದೊಂದು ಅವಸ್ಮರಣೀಯ ಘಟನೆ, ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿಗೆ ಮತ್ತು ಮಗುವಿಗೆ ಒಳ್ಳೆಯದಾಗಲಿ ಎಂದಯ ಹಾರೈಸಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top