
ಮಗಳ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿರೋ ಘಟನೆ ಮುಂಬೈನ ನಾಲಾ ಸೋಪಾರಾದಲ್ಲಿ ನಡೆದಿದೆ.ಸುರಶ್ ವಘೇಲಾ ಕೊಲೆಯಾದ ವ್ಯಕ್ತಿ, ಪತ್ನಿ ಜಾನು ಮತ್ತು ಮಗಳು ಮೋನಿಕಾ ಕೊಲೆ ಆರೋಪಿಗಳು ಎಂದು ಗುರುತಿಸಲಾಗಿದೆ. ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಕೆಲಸ ಮಾಡುತ್ತಿದ್ದ ವಘೇಲಾ ಜುಲೈನಲ್ಲಿ ೪ ಲಕ್ಷದ ಚೆಕ್ ಬಂದಿರುವುದು ಗೊತ್ತಾಗಿದ್ದು,ವಘೇಲಾ ಚೆಕ್ ಅನ್ನು ಬ್ಯಾಂಕ್ಗೆ ಹಾಕಿ ಹಣ ಪಡೆದಿರಲಿಲ್ಲ. ಇದೇ ವಿಚಾರವಾಗಿ ವಾದ ನಡೆದಿದೆ. ಅಲ್ಲದೇ ವಘೇಲಾ ತನ್ನ ಪತ್ನಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ವಘೇಲಾ ಶಂಕೆ ವ್ಯಕ್ತಪಡಿಸಿದ್ದಾನೆ. ಇದೇ ವಿಚಾರವಾಗಿ ೨೭ರಂದು ಪತ್ನಿ,ಮಗಳು ಹಾಗೂ ವಘೇಲಾ ನಡುವೆ ಜಗಳವಾಗಿದ್ದು, ಇದು ತಾರಕಕ್ಕೇರಿದೆ. ಈ ವೇಳ ಪತ್ನಿ ಹಾಗೂ ಮಗಳು ಸೇರಿ ವಘೇಲಾ ಮೇಲೆ ಹಲ್ಲೇ ನಡೆಸಿದ್ದಾರೆ. ಕಿಟಕಿಗೆ ಮುಖವನ್ನು ಗುದ್ದಿದ್ದಾರೆ. ಇದರ ಪರಿಣಾಮ ಗಾಜುಗಳು ಮುಖಕ್ಕೆ ಚುಚ್ಚಿ ಗಂಭೀರ ಗಾಯಗಳಾಗಿದ್ದವು, ತ್ರೀವ್ರ ಗಾಯಗೊಂಡ ವಘೇಲಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತನಿಖೆ ವೇಳೆ ಮದ್ಯಪಾನ ಮಾಡಿದ್ದರಿಂದ ಕಿಟಕಿಗೆ ತಲೆ ಹೊಡೆದುಕೊಂಡಿದ್ದ ಎಂದು ಪತ್ನಿ ಮತ್ತು ಮಗಳು ಕಥೆಕಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸತ್ಯ ಬಯಲಾಗಿದ್ದು, ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಇಬ್ಬರು ತಪ್ಪೊಪ್ಪಿಕೊಂಡಿದ್ದು, ಇಬ್ಬರನ್ನೂ ಸೆಪ್ಟೆಂಬರ್ ೫ರವರೆಗೆ ಪೊಲೀಸ್ ಕಷ್ಟಡಿಗೆ ಒಪ್ಪಿಸಲಾಗಿದೆ.