ಮಕ್ಕಳೆದುರೆ ತರಗತಿಯಲ್ಲಿ ಬೀಡಿ ಸೇದಿದ ಶಿಕ್ಷಕ..ಸಸ್ಪೆಂಡ್‌..!

ಗರು ದೇವೋ ನಮಃ ಅನ್ನೋ ಮಾತಿದೆ, ಗುರು ಹೇಳಿದ ಮಾರ್ಗದಲ್ಲಿ ಶಿಷ್ಯ ನಡೆಯ ಬೇಕು ಅನ್ನೋ ಮಾತಿದೆ,ಅದೇ ಶಿಕ್ಷಕ ತಪ್ಪನ್ನು ಮಾಡಿದ್ರೆ ಏನು ಮಾಡಬೇಕು, ಮಕ್ಕಳು ಏನು ಕಲಿಯ ಬೇಕು ಅನ್ನೋ ಅನುಮಾನ ಶುರುವಾಗುತ್ತದೆ, ಅದೇ ರೀತಿಯ ಘಟನೆಯೊಂದು ಈಗ ನಡೆದಿದ್ದು ಇಡೀ ಶಿಕ್ಷಕ ವೃಂಧವೇ ತಲೆ ತಗ್ಗಿಸುವಂತಾಗಿದೆ, ಇಂತಹ ಘಟನೆ ನಡೆದಿರೋದು, ಉತ್ತರ ಪ್ರದೇಶದ ಸೀತಾಪುರದಲ್ಲಿ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕನೊಬ್ಬ ತರಗತಿಯಲ್ಲೇ ಕುಳಿತು ಮಕ್ಕಳ ಎದುರು ಬೀಡಿ ಕಚ್ಚಿಕೊಂಡು ಸೇದಿರೋ ಸುದ್ದಿ ಈಗ ಎಲ್ಲಾ ಕಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಈ ಶಿಕ್ಷಕ ಬೀಡಿ ಸೇದುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈ ವಿಷಯ ತಿಳಿದ ಶಿಕ್ಷಣಾಧಿಕಾರಿ, ಆ ಶಿಕ್ಷಕ ಯಾರು ಆತನ ಪೂರ್ಣ ವಿವರ ಪಡೆದು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಇನ್ನುಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top