ಭಿಕ್ಷುಕನ ಬಳಿ ಇದ್ದ ಹಣ ಕಂಡು ದಂಗಾದ ಜನ..!

ಭಿಕ್ಷುಕನೊಬ್ಬನ ಬಳಿ ಇದ್ದು ಹಣ ಕಂಡು ದಂಗಾಗಿದ್ದಾರೆ ಊರಿನ ಜನ, ಈ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ. ರಂಗಸ್ವಾಮಯ್ಯ ಅನ್ನೋ ವಿಕಲಚೇತನ ಪ್ರತಿದಿನ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಸ್ಥರು ಪ್ರತಿದಿನ ಆತನಿಗೆ ಊಟ ನೀಡುತ್ತಿದ್ದರು, ಒಂದು ದಿನ ಆತನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವ ಸಂದರ್ಭದಲ್ಲಿ ಹಣ ಪತ್ತೆಯಾಗಿದ್ದು, ಭಿಕ್ಷೆ ಬೇಡಿದ ಮತ್ತು ಮಾಸಾಶನದ ಹಣ ಸೇರಿ ೬೦೦೦೦ ರೂಪಾಯಿ ನೋಟಿನ ಕಂತೆ ಪತ್ತೆಯಾಗಿದೆ.ಇನ್ನು ಗ್ರಾಮಸ್ಥರು ಆತನ ಬಳಿ ಇದ್ದ ಹಣವನ್ನು ನೋಡಿ ಅದನ್ನು ಬ್ಯಾಂಕಿನಲ್ಲಿ ಜಮೆ ಮಾಡಿ ಹಣವನ್ನು ದರ್ಬಳಕೆ ಮಾಡುವುದನ್ನು ತಡೆಗಟ್ಟಿದ್ದಾರೆ ಅಲ್ಲದೆ ರಂಗಸ್ವಾಮಯ್ಯನನ್ನು ಅನಾಥಾಶ್ರಮಕ್ಕೆ ಸೇರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top