ಭಾವುಕ ಕಥೆ…ಬೊಂಬಾಟ್ ಮೇಕಿಂಗ್… ನಿರೀಕ್ಷೆ ಹುಟ್ಟಿಸಿದ ನಾನು ಮತ್ತು ಗುಂಡ ಟ್ರೈಲರ್ !

ನಾನು ಮತ್ತು ಗುಂಡ ಚಿತ್ರ ರಿಲೀಸ್ ಇದೇ 24ನೇ ತಾರೀಖು ರಿಲೀಸ್ ಆಗ್ತಿದೆ. ಈಗಾಗ್ಲೇ ಪೋಸ್ಟರ್ಸ್ ಮತ್ತು ಟೀಸರ್ ಗಳಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹ ಹುಟ್ಟಿಸಿದ ಈ ಚಿತ್ರದ ಟ್ರೈಲರ್ ಇದೀಗ ರಿಲೀಸ್ ಆಗಿದೆ.
ನಾನು ಮತ್ತು ಗುಂಡ ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ರೊಟೀನ್ ಸಿನಿಮಾಗಳ ಮಧ್ಯ ಈ ಸಿನಿಮಾ ಸ್ಪೆಷಲ್ ಆಗಿ ಕಾಣ್ತಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧ ಹೊಂದಿರೋ ಒಂದು ನೈಜ್ಯ ಘಟನೆಯನ್ನಾಧರಿಸಿ ಮಾಡಿರೋ ನಾನು ಮತ್ತು ಗುಂಡ ಸಿನಿಮಾದ ಟ್ರೈಲರ್ ಎಲ್ಲಾ ರೀತಿಯ ಮನರಂಜನೆಯನ್ನ ಕೊಡೋ ಸೂಚನೆ ಕೊಟ್ಟಿದೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಪಾತ್ರ ಪ್ರಮುಖವಾಗಿ ಕಾಣ್ತಿದ್ದು, ಸಿಂಬಾ ( ನಾಯಿ) ಪಾತ್ರ ಹೈಲೈಟ್ ಆಗಿದೆ. ಇವ್ರ ಜೊತೆಗೆ ಸಂಯುಕ್ತ ಹೊರನಾಡು, ಗೋವಿಂದೇ ಗೌಡ ಪಾತ್ರಗಳು ಇಂಟ್ರೆಸ್ಟಿಂಗ್ ಆಗಿ ಕಾಣ್ತಿವೆ.


ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಭರವಸೆ ಮೂಡಿಸಿದ್ದು, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ಕ್ವಾಲಿಟಿಯಾಗಿ ಚಿತ್ರವನ್ನ ನಿರ್ಮಿಸಿರೋದು ಕಾಣ್ತಿದೆ. ಶರತ್ ಚಕ್ರವರ್ತಿ ಯವರ ಡೈಲಾಗ್ಸ್ ಮತ್ತು ಕಾರ್ತಿಕ್ ಶರ್ಮಾ ಸಂಗೀತ ನಾನು ಮತ್ತು ಗುಂಡ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿ ಕಾಣ್ತಿದೆ.

ಅಂದ್ಹಾಗೆ ಇದೀಗ ಟ್ರೈಲರ್ ಮೂಲಕ ರಿಲೀಸ್ ಡೇಟ್ನ ಅಧಿಕೃತಗೊಳಿಸಿರೋ ನಾನು ಮತ್ತು ಗುಂಡ ಈ ವಾರ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಮೈಸೂರು ಟಾಕೀಸ್ನ ಜಾಕ್ ಮಂಜು ಈ ಚಿತ್ರವನ್ನ ವಿತರಿಸ್ತಿದ್ದು, ಉದ್ಯಮದಲ್ಲೂ ಈ ಚಿತ್ರದ ಮೇಲೆ ವಿಶೇಷ ನಿರೀಕ್ಷೆ ಹುಟ್ಟಿಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top