
ಇಂಗ್ಲೆಂಡ್ ಕ್ರಿಕೆಟ್ನ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಭಾರತಕ್ಕೆ ಬಹಳಷ್ಟು ಋಣಿಯಾಗಿದ್ದೇನೆ ಎಂದು ಥ್ಯಾಂಕ್ಸ್ ಹೇಳಿದ್ದಾರೆ.
ಪೀಟರ್ಸನ್ ಇತ್ತಿಚೆಗೆ ಮಾತನಾಡುವಾಗ, ಈ ಬಾರಿಯ ಐಪಿಎಲ್ ಎಲ್ಲಾ ಐಪಿಎಲ್ಗಿಂತ ಭಿನ್ನವಾಗಿರಲಿದೆ. ಎಲ್ಲರೂ ಬಯೋ ಬಬಲ್ನಲ್ಲಿರುತ್ತಾರೆ.ಇದು ಎಲ್ಲರಿಗೂ ಹೊಸ ಪ್ರದೇಶ ಎಂದು ಪೀಟರ್ಸನ್ ಹೇಳಿದ್ದಾರೆ.
ಈ ಬಾರಿ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವನ್ನು ಸಾಧಿಸಲಿದೆ, ಯಾಕೆಂದ್ರೆ ನಾನು ಆ ತಂಡವನ್ನು ಪ್ರೀತಿಸುವ ಕಾರಣ ಈ ಮಾತನ್ನು ಹೇಳುತ್ತಿದ್ದೇನೆ. ಈಗಲೇ ಯಾವ ತಂಡ ಐಪಿಎಲ್ ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವು ಮ್ಯಾಚ್ಗಳು ಆದ ಮೇಲೆ ಮೆದುಳಿಗೆ ಕೆಲಸವನ್ನು ನೀಡಿ ಆ ನಂತರ ಯಾವ ತಂಡ ಐಪಿಎಲ್ ಗೆಲ್ಲಲಿದೆ ಎಂದು ಹೇಳಬಹುದು, ನಾನು ಡೆಲ್ಲಿ ಕ್ಯಾಪಿಟಲ್ ತಂಡವನ್ನು ಪ್ರೀತಿಸುವುದರಿಂದ ಸದ್ಯ ಆ ತಂಡ ಕಪ್ ಗೆಲ್ಲಲಿದೆ ಎಂದು ಹೇಳುತ್ತಿದ್ದೇನೆ ಎಂದು ಪೀಟರ್ಸನ್ ಹೇಳಿದ್ದಾರೆ.
ಇನ್ನು ನಾನು ಭಾರತಕ್ಕೆ ಯಾವಾಗಲೂ ಋಣಿಯಾಗಿರುತ್ತೇನೆ, ನಾನು ಆರ್ಥಿಕವಾಗಿ ಐಪಿಎಲ್ನಿಂದ ಲಾಭ ಪಡೆದಿದ್ದೇನೆ. ಭಾರತದಲ್ಲಿ ನನಗೆ ಭಾವನಾತ್ಮಕವಾಗಿ ಲಾಭವಾಗಿದೆ. ನಾನು ಭಾರತಕ್ಕೆ ಸಾಕಷ್ಟು ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಕೇವಿನ್ ಪೀಟರ್ಸನ್ ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪುಣೆ ಸೂಪರ್ ಜೈಂಟ್ ತಂಡವನ್ನು ಪ್ರತಿನಿಧಿಸಿದ್ರು.