ಬ್ಯಾನ್‌ ಆದ ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ..

ಭಾರತದಲ್ಲಿ ಚೀನಿ ಆಪ್‌ಗಳು ಬ್ಯಾನ್‌ ಆಗಿದ್ದು, ಅದರಲ್ಲೂ ಪಬ್‌ ಜಿ ಕೂಡ ಬ್ಯಾನ್‌ ಆಗಿದೆ. ಪಬ್‌ ಜಿ ಬ್ಯಾನ್‌ ಆದಾಗಿನಿಂದ ಪಬ್‌ಜಿ ಆಡುತ್ತಿದ್ದವರು ಒಂದಿಷ್ಟು ಮಂದಿ ಖಿನ್ನತೆಗೆ ಒಳಗಾಗಿದ್ದಾರೆ. ಅದೇ ರೀತಿ ಬ್ಯಾನ್‌ ಆದ ಪಬ್‌ ಜಿ ಆಡಬೇಡ ಎಂದು ತಂದೆ ಹೇಳಿದ್ದಕ್ಕೆ ೧೨ನೇ ತರಗತಿ ಓದುತ್ತಿದ್ದ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಶ್ರೀನಿವಾಸ್‌ ಆತ್ಮಹತ್ಯೆ ಮಾಡಿಕೊಂಡ ಯುವಕ, ಲಾಕ್‌ಡೌನ್‌ನಿಂದಾಗಿ ಶಾಲೆ ಕಾಲೇಜುಗಳು ಇಲ್ಲದ ಕಾರಣ ಮನೆಯಲ್ಲಿದ್ದ ಶ್ರೀನಿವಾಸ್‌ ಪಬ್‌ಜಿ ಹೆಚ್ಚು ಸಮಯ ಆಡುತ್ತಿದ್ದ, ಹೀಗಾಗಿ ಈತನಿಗೆ ಪಬ್‌ಜಿ ಹುಚ್ಚು ಹಿಡಿದಿತ್ತು. ಇನ್ನು ಇದನ್ನು ನೋಡುತ್ತಿದ್ದ ತಂದೆ ಪೆರುಮಾಳ್‌ ಚೀನಿ ಆಪ್‌ ಬಳಸಬೇಡ, ಪಬ್‌ ಜಿ ಬ್ಯಾನ್‌ ಆಗಿದೆ ಅದನ್ನು ಬಳಸಬೇಡ ಎಂದು ಹೇಳಿದ್ದಾರೆ. ಮಾತು ಕೇಳದ ಶ್ರೀನಿವಾಸ್‌ ಪಬ್‌ ಜಿ ಆಡುತ್ತಿದ್ದ ಸಿಟ್ಟಿಗೆದ್ದ ತಂದೆ ಮೊಬೈಲ್‌ ಕಸಿದುಕೊಂಡಿದ್ದ ಇದರಿಂದ ಮನನೊಂದ ಶ್ರೀನಿವಾಸ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆನಿಂದಾಗಿ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top