ಬೋಳು ತಲೆ ಇರೋದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಗಂಡನ ವಿರುದ್ಧ ಹೆಂಡತಿ ದೂರು..

ಬೋಳು ತಲೆ ಇರೋದನ್ನು ಮುಚ್ಚಿಟ್ಟು ಮದುವೆಯಾಗಿರೋ ವಿಷಯ ಒಂದು ತಿಂಗಳ ನಂತರ ತಿಳಿದ ಮಹಿಳೆ ಗಂಡನ ವಿರುದ್ಧ ದೂರ ಸಲ್ಲಿಸಿರೋ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

27 ವರ್ಷದ ಯುವತಿ ಕಳೆದ ಒಂದು ತಿಂಗಳ ಹಿಂದೆ ಕುಟುಂಬಸ್ಥರು ನೋಡಿ ನಿರ್ಧರಿಸಿದ್ದ ಯುವಕನ ಜೊತೆ ಮದುವೆಯಾಗಿದ್ದು, ಆದ್ರೆ ಯುವಕನಿಗೆ ಬೋಳು ತಲೆ ಇರೋದನ್ನು ಮುಚ್ಚಿಟ್ಟು ಮದುವೆಯಾಗಿದ್ದು, ಇದನ್ನು ತಿಳಿದ ಯುವತಿ ತನ್ನ ಗಂಡ ಮತ್ತು ಆತನ ಕುಟುಂಬಸ್ಥರನ್ನು ಪ್ರಶ್ನೆ ಮಾಡಿದ್ದಾಳೆ.ಅದಕ್ಕೆ ಆತನ ಕುಟುಂಬಸ್ಥರು ʻ ಇಂದಿನ ಕಾಲದಲ್ಲಿ ಇದು ದೊಡ್ಡ ವಿಷಯವಲ್ಲʼ ಎಂದು ಹೇಳಿ ಸುಮ್ಮನಾಗಿದ್ದಾರೆ.

ಮದುವೆಯಾಗಿದ್ದ ಯುವತಿಗೆ ಬೋಳು ತಲೆ ಇರೋದು ತಿಳಿದು ಶಾಕ್‌ ಆಗಿದ್ದು, ತನಗೆ ಸುಳ್ಳು ಹೇಳಿ ಮದುವೆಯಾದ ಪತಿಯ ವಿರುದ್ಧ ಆಕೆ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾಳೆ. 29 ವರ್ಷದ ಯುವಕ ವಿಗ್‌ ಧರಿಸಿ ಮದುವೆಯಾಗಿದ್ದ, ಸದ್ಯ ಆತ ಥಾಣೆ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾನೆ.

ಇತ್ತ ಯುವತಿ ನಾನು ನನ್ನ ಪತಿ ವಿಗ್‌ ಧರಿಸಿರುವದನ್ನು ತಿಳಿದು ಆಘಾತಕ್ಕೊಳಗಾಗಿದ್ದೇನೆ.ಈ ವಿಚಾರ ನನಗೆ ಮದುವೆಗೆ ಮುಂಚೆ ತಿಳಿದಿರಿಲ್ಲ,ನನಗೆ ಗೊತ್ತಾಗಿದ್ದರೆ ಈ ಮದುವೆ ಪ್ರಸ್ತಾಪವನ್ನೇ ತಿರಸ್ಕರಿಸುತ್ತಿದ್ದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top