ಬೈಕ್ ನಿಧಾನಕ್ಕೆ ಓಡಿಸ್ರಪ್ಪ..ಎಂದು ಸಿಟ್ಟಾದ ಕಿಚ್ಚ ಸುದೀಪ್..!

ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬ ವೇಗವಾಗಿ ಬೈಕ್ ಓಡಿಸುತ್ತಿದ್ದನ್ನು ಕಂಡು ತಕ್ಷಣ ಆತನನ್ನು ತಡೆದು ಕಿಚ್ಚ ಸುದೀಪ್ ಬುದ್ಧಿವಾದ ಹೇಳಿರೋ ಘಟನೆ ನಡೆಸಿದೆ.. ಈ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..ಸುದೀಪ್ ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು.
ಸುದೀಪ್ ಕಾರಿನಲ್ಲಿ ಕುಳಿತಿದ್ದ ವೇಳೆ. ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದವರನ್ನು ನಿಲ್ಲಿಸಿದ್ದಾರೆ. ನಂತರ “ಏನ್ರೀ ನೀವು ಇಷ್ಟು ವೇಗವಾಗಿ ಬರುತ್ತಿದ್ದೀರ ಬ್ರದರ್” ಎಂದು ಸ್ವೀಟಾಗಿ ಪ್ರಶ್ನಿಸಿದ್ದಾರೆ. ತಕ್ಷಣ ಬೈಕ್ ಓಡಿಸುತ್ತಿದ್ದವರು ಸಾರಿ ಸರ್, ನಿಧಾನಕ್ಕೆ ಬರುತ್ತೀವಿ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಸದ್ಯ ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಈ ವಿಡಿಯೋಗೆ ಈಗ‌ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top