ಬೇರೆಯವರ ಜೊತೆ ಮಾತನಾಡಿದಕ್ಕೆ ಪ್ರೇಯಸಿಯನ್ನು ಕೊಂದ ಪ್ರೇಮಿ

ಬೇರೆಯವರ ಜೊತೆ ತನ್ನ ಪ್ರೇಯಸಿ ಮಾತನಾಡಿದಕ್ಕೆ ಪ್ರೇಯಸಿಯನ್ನ ಪ್ರೇಮಿ ಕೊಲೆ ಮಾಡಿರೋ ಘಟನೆ ಉತ್ತರ ಪ್ರದೇಶದ ಬಿಜನೌರ್‌ ಜಿಲ್ಲೆಯಲ್ಲಿ ನಡೆದಿದೆ. ಕಾಜಲ್‌ ಎಂಬ ಯುವತಿಯನ್ನು ಸಲೀಂ ಎಂಬ ಯುವಕ ಕೊಲೆ ಮಾಡಿದ್ದಾನೆ. ಕಾಜಲ್‌ ತನಗೆ ಪರಿಚಯಸ್ಥ ಯುವಕನ ಜೊತೆ ಮಾತನಾಡುತ್ತಿರುವುದನ್ನು ನೋಡಿದ ಪ್ರೇಮಿ ಸಲೀಂ ಯುವತಿಯ ಕತ್ತು ಕೂಯ್ದು ಹೊಲದಲ್ಲಿ ಬಿಸಾಡಿದ್ದಾನೆ. ದೇಹದ ಮೇಲೆ ಪ್ರಾಣಿಗಳು ದಾಳಿ ಮಾಡಿದ್ದು, ದೇಹದ ಭಾಗಗಳು ಬಿಡಿಯಾಗಿದ್ದು ಗುರುತು ಸಿಗದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವದ ಮೇಲಿದ್ದ ಬಟ್ಟೆಯ ಆಧಾರದ ಮೇಲೆ ಮೃತದೇಹವನ್ನು ಗುರುತಿಸಿದ್ದಾರೆ.

ಮೂರು ವರ್ಷಗಳಿಂದ ಕಾಜಲ್‌ ಮತ್ತು ಸಲೀಂ ಪ್ರೀತಿಸುತ್ತಿದ್ದು ಪರಿಚಯಸ್ಥರ ಜೊತೆ ಮಾತನಾಡುವುದನ್ನು ಕಂಡು ಕಾಜಲ್‌ಳನ್ನು ಮುಗಿಸಬೇಕೆಂದು ನಿರ್ಧರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇನ್ನು ಶವವನ್ನು ಗುರುತಿಸಿದ ನಂತರ ಪ್ರೇಮಿ ಸಲೀಂ ಮೇಲೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಾಜಲ್‌ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top