ಬೆತ್ತಲೆಯಾಗಿ ಲಂಡನ್‌ ಬೀದಿಯಲ್ಲಿ ಸೈಕಲ್‌ನಲ್ಲಿ ಸುತ್ತಿದ ಮಹಿಳೆ ಭೇಷ್‌ ಎಂದ ನೆಟ್ಟಿಗರು..

ಮಹಿಳೆಯೊಬ್ಬಳು ನಗ್ನವಾಗಿ ಲಂಡನ್‌ನ ಬೀದಿ ಬೀದಿಯಲ್ಲಿ ಸುತ್ತಾಡುವ ಮೂಲಕ ಸದ್ಯ ವೈರಲ್‌ ಆಗಿದ್ದು, ಈ ಮಹಿಳೆ ಮಾಡುತ್ತಿರೋ ಈ ಕೆಲಸಕ್ಕೆ ಇದೀಗ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅರೇ ಬೆತ್ತಲೆಯಾಗಿ ಓಡಾಡುತ್ತಿರೋ ಮಹಿಳೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ ಎಂದು ಅಶ್ಚರ್ಯವಾಗುತ್ತಿದೆಯಾ, ಹೌದು ಈ ಮಹಿಳೆ ಬೆತ್ತಲೆಯಾಗಿ ಸುತ್ತಾಡಿದ್ರು ಆಕೆ ಮಾಡುತ್ತಿರೋ ಕೆಲಸಕ್ಕೆ ಇದೀಗ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ರೀತಿ ಲಂಡನ್‌ನಲ್ಲಿ ಬೀದಿ ಬೀದಿಯಲ್ಲಿ ನಗ್ನವಾಗಿ ಸೈಕಲ್‌ನಲ್ಲಿ ಸುತ್ತುತ್ತಿರೋ ಮಹಿಳೆಯ ಹೆಸರು ಕೆರ್ರಿ ಬಾರ್ನ್ಸ್‌ ಎಂದು. ಕೊರೋನಾದಿಂದ ಇಡೀ ವಿಶ್ವವೇ ಲಾಕ್‌ಡೌನ್‌ನಿಂದಾಗಿ ಎಲ್ಲರಿಗೂ ಸಮಸ್ಯೆ ಉಂಟಾಗಿದ್ದು.

ಒಂದಿಷ್ಟು ಜನ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಈ ಮಹಿಳೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರೋ ಕೆರ್ರಿ ಈ ರೀತಿ ನಗ್ನವಾಗಿ ಓಡಾಡುವ ಹಿಂದೆ ಚಾರಿಟಿ ಉದ್ದೇವೂ ಇದೆ. ನಾನು ಬೆತ್ತಲೆಯಾಗಿ ಓಡಾಡುವುದನ್ನು ತಪ್ಪೋ ಸರಿಯೋ ಎಂಬುದನ್ನು ನಿರ್ಧರಿಸುವುದು ನೋಡುವವರ ಮೇಲೆ ನಿಂತಿದೆ. ನಾನು ಈ ರೀತಿ ಮಾಡಲು ಕಾರಣ ಲಾಕ್‌ಡೌನ್‌ ವೇಳೆ ನನ್ನ ಪ್ರೀತಿ ಪಾತ್ರರೊಬ್ಬರು ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ಲಾಕ್‌ಡೌನ್‌ ಇದ್ದುದ್ದರಿಂದ ನಾನು ಬೇರೆ ಕಡೆ ಇದ್ದುದ್ದರಿಂದ ಅವರಿಗೆ ನಾನು ಸಹಾಯ ಮಾಡಲು ಸಾಧ್ಯವಾಗಲಿಲ್ಲ.

ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ತುಂಬಾ ಪಶ್ಚಾತ್ತಾಪ ಪಡುತ್ತಿದ್ದೇನೆ. ಇದರಿಂದಾಗಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿದ್ದು. ಅದಕ್ಕಾಗಿ ಸೈಕ್ಲಿಂಗ್‌ ಮೂಲಕ ಈ ರೀತಿ ಜಾಗೃತಿ ಮೂಡಿಸುತ್ತಿದ್ದೇನೆ. ನಾನು ಈ ವೇಳೆ ಹೆಚ್ಚು ಜನರೊಂದಿಗೆ ಮಾತನಾಡುತ್ತಿದ್ದೇನೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಎಷ್ಟು ವ್ಯಾಪಕವಾಗಿದೆ ಎಂದು ಅರಿತುಕೊಂಡೆ. ಮಾನಸಿಕವಾಗಿ ಕುಗ್ಗಿದವರಿಗೆ ಧೈರ್ಯ ತುಂಬಿದ್ದೇನೆ ಸಾಂತ್ವಾನ ಮಾಡಿದ್ದೇನೆ ಎಂದು ಹೇಲೀದ್ದು.

ಕೆಲಸ ಕಳೆದುಕೊಂಡಿರುವವರ ನೆರವಿಗೆ ನಿಲ್ಲುವ ಉದ್ದೇಶಿದಿಂದ ನಗ್ನವಾಗಿ ಸೈಕ್ಲಿಂಗ್‌ ಮೂಲಕ ಒಂದು ಸಾವಿರ ಪೌಂಡ್‌ ಸಂಗ್ರಹಿಸುವ ಗುರಿ ನನ್ನದಾಗಿತ್ತು, ಆದ್ರೆ ಇದೀಗ 7 ಸಾವಿರ ಪೌಂಡ್‌ ಸಂಗ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದು. ಈ ರೀತಿ ಕೆಲಸವನ್ನು ಬಟ್ಟೆ ಹಾಕಿಕೊಂಡು ಮಾಡಬಹುದಿತ್ತಲ್ಲಾ ಎಂಬ ಪ್ರಶ್ನೆಗೆ ಸದ್ಯ ಆಕೆಯಿಂದ ಉತ್ತರ ಬಂದಿಲ್ಲ. ಆದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಈ ರೀತಿ ಕೆರ್ರಿ ಮಾಡುತ್ತಿರೋ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top