ಬೆಕ್ಕಿಗೆ ಹಾಲು ಕುಡಿಸಿ ಅಚ್ಚರಿ ಮೂಡಿಸಿದ ಹಂದಿ..!

ತಾಯಿ ಪ್ರೀತಿಗೆ ಕೊನೆಯಿಲ್ಲ ಅನ್ನೋ ಮಾತು ಯಾವಾಗ್ಲೂ ಕಟು ಸತ್ಯ, ಇನ್ನು ತಾಯಿ ಯಾವುದೇ ಕಾರಣಕ್ಕೂ ಮಗುವಿಗೆ ಎಂದೂ ಭೇದ ಭಾವ ಮಾಡೋಲ್ಲ ಅದು ತನ್ನದೇ ಮಗುವಿರಲಿ ,ಬೇರೆಯದೇ ಮಗುವಿರಲಿ‌ ಮಗು ನೋಡಿದ ಕೂಡಲೇ ತಾಯಿ ಕರಗೋ ತ್ಯಾಗಮಯಿ, ತಾಯಿಯ ಗುಣವೇ ಅಂತಹದ್ದು, ಅದು ಮನುಷ್ಯನಿಗೆ ಮಾತ್ರ ಸೀಮಿತವಾಗಿರೋಲ್ಲ ಜಗತ್ತಿನ ಪ್ರತಿಯೊಂದು ಪ್ರಾಣಿ ಸಂಕುಲದಲ್ಲೂ ಇದು ರೂಢಿಯಲ್ಲಿದೆ, ಪ್ರಪಂಚದಲ್ಲಿ ನಾವೂ ನಾಯಿ ಬೆಕ್ಕಿಗೆ ,ಹಸು ನಾಯಿಗೆ,ಬೆಕ್ಕು‌ ಇನ್ಯಾವುದೋ ಪ್ರಾಣಿ ಹಾಲುಣಿಸುವುದನ್ನು ನೋಡಿದ್ದೇವೆ,ಆದ್ರೆ ಹಾವೇರಿಯ ಬ್ಯಾಡಗಿಯಲ್ಲಿ ಇದೇ ರೀತಿಯ ಅಚ್ಚರಿಯ ಘಟನೆಯೊಂದು ನಡೆದಿದೆ, ಹಂದಿಯೊಂದು ಬೆಕ್ಕಿಗೆ ಹಾಲುಣಿಸುತ್ತಿರೋ ವಿಶೇಷ ಘಟನೆಯೊಂದು ನಡೆದಿದೆ ,ಬೆಳಗಿನ ಜಾವ ಈ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದ್ದು ಬ್ಯಾಡಗಿಯ ಜನತೆ ಈ ಅಚ್ಚರಿಯನ್ನು ನೋಡಿ‌ ಒಮ್ಮೆಲೇ ಆಶ್ಚರ್ಯ ಚಕಿತರಾಗಿದ್ದಾರೆ ಜೊತೆಗೆ ತಾಯಿ ಮಗುವಿನ ಮಮತೆ ಕಂಡು ಈ ಅಚ್ಚರಿಯ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ ಸದ್ಯ ಈ ವಿಡಿಯೋ ಈ‌ ಸಖತ್ ವೈರಲ್ ಕೂಡ ಆಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top