ಬೆಂಗಳೂರಿಗೆ ಬಂದು ಅಣ್ಣನ ಆಶೀರ್ವಾದ ಪಡೆದ ರಜಿನಿಕಾಂತ್‌

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಬೆಂಗಳೂರಿನಲ್ಲಿ ನೆಲೆಸಿರೋ ತಮ್ಮ ಅಣ್ಣ ಮನೆಗೆ ಬಂದು ಅಣ್ಣನ ಆಶೀರ್ವಾದ ಪಡೆದಿದ್ದಾರೆ. ಇದೇ ಡಿಸೆಂಬರ್‌ 31ಕ್ಕೆ ಹೊಸ ಪಕ್ಷ ಲಾಂಚ್‌ ಮಾಡುವ ಬಗ್ಗೆ ಯೋಜನೆಯನ್ನು ಹಾಕಿಕೊಂಡಿರೋ ರಜಿನಿ , ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬೆಂಗಳೂರಿಗೆ ಬಂದು ತಮ್ಮ ಅಣ್ಣ ಸತ್ಯನಾರಾಯಣ್‌ ರಾವ್‌ ಅವರನ್ನು ಭೇಟಿ ಮಾಡಿ ರಾಜಕೀಯ ಪಕ್ಷ ಘೋಷಣೆ ಮಾಡುವ ಮುನ್ನ ಅಣ್ಣನ ಜೊತೆ ಮಾತನಾಡಿದ್ದಾರೆ.

ಹೊಸ ಪಕ್ಷ ಘೋಷಣೆ ಬಗ್ಗೆ ವಾರದ ಹಿಂದೆ ಟ್ವೀಟ್‌ ಮಾಡಿದ್ದ ರಜಿನಿ ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಲಾಂಚ್‌ ಮಾಡಲಿದ್ದೇನೆ. ಈ ವಿಚಾರವಾಗಿ ಡಿಸೆಂಬರ್‌ 31ರಂದು ಘೋಷಣೆ ಮಾಡಲಿದ್ದೇನೆ ಎಂದು ಟ್ವೀಟ್‌ ಮಾಡಿ ಹೇಳಿದ್ರು. ಇದೀಗ ರಜಿನಿ ಅವರ ಡಿಸೆಂಬರ್‌ 31ರ ಅನೌನ್ಸ್‌ಮೆಂಟ್‌ ಏನು ಅನ್ನೋದ್ರ ಬಗ್ಗೆ ಕುತೂಹಲಗಳು ಕೂಡ ಹೆಚ್ಚಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top