
ಬೆಂಗಳೂರು ನಗರ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ ಎಂದು ಆರ್ಸಿಬಿ ತಂಡದ ಆಟಗಾರ ಆರೋನ್ ಫಿಂಚ್ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಫಿಂಚ್..ನನಗೆ ಇಷ್ಟವಾದ ನಗರಗಳಲ್ಲಿ ಬೆಂಗಳೂರು ಕೂಡ ಒಂದು, ನನ್ನ ಹೃದಯದಲ್ಲಿ ಬೆಂಗಳೂರಿಗೆ ವಿಶೇಷವಾದ ಸ್ಥಾನವಿದೆ. ಅದು ನನ್ನ ನೆಚ್ಚಿನ ನಗರ, ನಾನು ಬೆಂಗಳೂರಿನಲ್ಲೇ ನನ್ನ ಗೆಳತಿಗೆ ಪ್ರಮೋಸ್ ಮಾಡಿದ್ದು , ಆದ್ದರಿಂದಾಗಿ ಬೆಂಗಳೂರಿಗೆ ವಿಶೇಷ ಸ್ಥಾನ ನನ್ನ ಹೃದಯದಲ್ಲಿದೆ. ಸದ್ಯ ನಾವು ಬೆಂಗಳೂರಿನಲ್ಲಿ ಆಡುತ್ತಿಲ್ಲ. ಅದಷ್ಟು ಬೇಗ ಅಲ್ಲಿಗೆ ಮರುಳುತ್ತೇವೆ ಎಂಬ ನಂಬಿಕೆ ಇದೆ ಎಂದು ಪಿಂಚ್ ಹೇಳಿದ್ರು.