ಬೀದಿ ನಾಯಿಗಳ ಉಳಿವಿಗಾಗಿ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ..??

ಬೀದಿ ನಾಯಿಗಳಂದ್ರೆ ಅದೆಷ್ಟೋ ಜನ್ರಿಗೆ ತಾತ್ಸಾರ. ಕೆಲವರು ಅವುಗಳನ್ನ ಕಂಡ್ರೆ ಹೊಡೆದು ನೋಯಿಸ್ತಾರೆ ಬಿಟ್ರೆ, ಅದರ ಮೇಲೆ ಕನಿಕರ ತೋರ್ಸೋ ಜನರು ಮಾತ್ರ ತುಂಬಾ ವಿರಳ. ಮನೆಯಲ್ಲಿ ಸಾಕೋ ನಾಯಿಗೆ ಮಾತ್ರ ಪ್ರೀತಿ ತೋರ್ಸೋ ಜನ್ರು, ಬೀದಿ ನಾಯಿಗಳನ್ನ ಕಂಡ್ರೆ ಮಾರುದ್ದ ಓಡೋಗ್ತಾರೆ. ಇನ್ನೂ ಕೆಲವರಂತೂ ನಮ್ ಏರಿಯಾದಲ್ಲಿ ಬೀದಿನಾಯಿ ಹಾವಳಿ ಜಾಸ್ತಿ ಇದೆ ಅಂತ ನಗರಸಭೆಗೋ, ಕಾರ್ಪೋರೇಷನ್ ಗೋ ದೂರು ನೀಡಿ ಕೊಲ್ಲಿಸುವಷ್ಟು ಕಟುಕರಾಗ್ತಾರೆ. ಇವ್ರೆಲ್ಲರ ಮಧ್ಯೆ ಓರ್ವ ವ್ಯಕ್ತಿ ಮಾತ್ರ ಬೀದಿನಾಯಿಗಳ ಉಳಿವಿಗಾಗಿ ಹಗಲು ರಾತ್ರಿ ಕಷ್ಟ ಪಡ್ತಿದ್ದಾನೆ ನೋಡಿ..!

ಹೌದು.. ಈಗೆಲ್ಲಾ ವಾಹನ ಸವಾರರು ನಾಯಿಗಳ ಮೇಲೆ ಕನಿಕರವನ್ನೇ ತೋರುಸ್ತಿಲ್ಲ.. ಬೀದಿ ನಾಯಿ ತಾನೆ ನಮ್ಮದೇನ್ ಅಲ್ಲ ಅಂತ ಅಡ್ಡ ಬಂದ ನಾಯಿಯ ಮೇಲೆ ಏಕಾಏಕಿ ಗಾಡಿ ಹತ್ಸಿ ಅದರ ಜೀವವನ್ನೇ ತೆಗಿತಿದಾರೆ. ಆದ್ರೆ ಕೆಲವೊಮ್ಮೆ ರಾತ್ರಿವೇಳೆಯಲ್ಲಿ ಮುಂದೆಯಿರೋ ಪ್ರಾಣಿಯ ಗುರುತು ಸಿಗದೇ ಬೇರೆ ದಾರಿ ಇಲ್ಲದೇ ಪ್ರಾಣಿಗಳ ಮೇಲೆ ವಾಹನ ಹರಿಸೋ ಸಂದರ್ಭಗಳೂ ಒದಗಿ ಬರುತ್ತೆ. ಇವುಗಳನ್ನೆಲ್ಲಾ ತಡೆಹಿಡಿಯೋ ನಿಟ್ಟಿನಲ್ಲಿ ಓರ್ವ ಯುವಕ ಎಲ್ಲರಿಗೂ ಮಾದರಿಯಾಗುವಂತ ಕೆಲಸವನ್ನು‌ ಮಾಡುತ್ತಾ ಬರ್ತಿದ್ದಾನೆ.

ಹೌದು.. ಬೀದಿ ನಾಯಿಗಳ ಉಳಿವಿಗಾಗಿ ಹಗಲಿರುಳು ಕಷ್ಟಪಡುತ್ತಿರೋ ವ್ಯಕ್ತಿಯ ಹೆಸರೇ ತೌಸಿಫ್ ಅಹಮದ್. ಮೂಲತಃ ಮಂಗಳೂರಿನವರಾದ ಇವರು ರಾತ್ರಿ ವೇಳೆ ವಾಹನಗಳಿಗೆ ಸಿಲುಕು ಪ್ರಾಣ ಕಳೆದುಕೊಳ್ತಿರೋ ನಾಯಿಗಳ ಉಳಿವಿಗಾಗಿ ಸಖತ್ ಪ್ಲಾನ್ ಮಾಡಿದ್ದಾರೆ. ಬೀದಿನಾಯಿಗಳ ಕುತ್ತಿಗೆಗೆ ರೇಡಿಯಂ ಬೆಲ್ಟ್ ಕಟ್ಟಿದ್ದಾರೆ. ಕತ್ತಲಿನಲ್ಲಿ ಸಂಚರಿಸೋ ವಾಹನ ಸವಾರರಿಗೆ ಬೀದಿನಾಯಿಗಳು ಕಾಣಲು ಈ ರೀತಿಯಾಗಿ ವಿಭಿನ್ನ ಕಾರ್ಯವನ್ನು ಮಾಡುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ರೇಡಿಯಂ ಬೆಲ್ಟ್ ಕಟ್ಟಲು ಶುರು ಮಾಡಿರೋ ಇವರು ನಾಯಿಗಳ ರಕ್ಷಣೆಗೆ ಪಣ ತೊಟ್ಟಿದ್ದಾರೆ. ವಿಶೇಷ ಅಂದ್ರೆ ನಾಯಿಗಳಿಗೆ ಹೊಳೆಯುವ ಬೆಲ್ಟ್ ಕಟ್ಟಿದ ದಿನದಿಂದ ಇಲ್ಲಿಯವರೆಗೂ ಒಂದೇ ಒಂದು ನಾಯಿ ಅಪಘಾತದಿಂದ ಸಾವನ್ನಪ್ಪಿಲ್ಲ ಅಂತಾರೆ ತೌಸಿಫ್. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top