
ಕೆಜಿಎಫ್ ಕನ್ನಡದ ಮಾಸ್ಟರ್ ಪೀಸ್ ಸಿನಿಮಾ, ಚಾಪ್ಟರ್ ೧ ಮೂಲಕ ಚಿತ್ರದ ಕುತೂಹಲ ಹೆಚ್ಚಾಗಿದ್ದು, ಚಾಪ್ಟರ್ 2 ಯಾವಾಗ ಬರಲಿದೆ ಅನ್ನೋ ಕುತೂಹಲ ಸಿನಿರಸಿಕರಲ್ಲಿ ಮನೆಮಾಡಿದೆ, ಎಲ್ಲವೂ ಸರಿ ಇದ್ದಿದ್ದರೆ ಈಗಾಗಲೇ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರುತ್ತಿತ್ತು, ಆದ್ರೆ ಕೊರೋನಾ ಮತ್ತು ಲಾಕ್ಡೌನ್ನಿಂದಾಗಿ ಚಿತ್ರದ ಶೂಟಿಂಗ್ ಮುಗಿಸಲು ಸಾಧ್ಯವಾಗಲಿಲ್ಲ,ಲಾಕ್ಡೌನ್ ನಂತರ ಇದೀಗ ಚಿತ್ರತಂಡ ಕೆಜಿಎಫ್ 2 ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದು, ಇಂದು ಅಧಿಕೃತವಾಗಿ ರಾಕಿಭಾಯ್ ಯಶ್ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ.
ಇಂದಿನಿಂದ ಕೆಜಿಎಫ್ ತಂಡ ಮತ್ತೊಂದು ಶೆಡ್ಯೂಲ್ನಲ್ಲಿ ಶೂಟಿಂಗ್ ಶುರುಮಾಡಿದ್ದು, ಉಡುಪಿಯ ಕೋಡಿ ಬೆಂಗ್ರೆ ಬೀಚ್ನಲ್ಲಿ ಶೂಟಿಂಗ್ ನಡೆಸುತ್ತಿದೆ, ಈಗಾಗಲೇ ಚಿತ್ರತಂಡವನ್ನು ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಸೇರಿಕೊಂಡಿದ್ದು, ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ.
ಇನ್ನು ಶೂಟಿಂಗ್ ಟೈಂನಲ್ಲೂ ಚಿತ್ರತಂಡ ಒಂದಿಷ್ಟು ಎಂಜಾಯ್ ಮಾಡ್ತಿದ್ದು ಉರಿ ಬಿಸಿನಲ್ಲಿ ಶೂಟಿಂಗ್ ಜೊತೆಯಲ್ಲಿ ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
ಪ್ರಶಾಂತ್ ನೀಲ್ ಬ್ಯಾಟಿಂಗ್ ಮಾಡುತ್ತಿರೊ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕೆಜಿಎಫ್ ಚಿತ್ರೀಕರಣದ ಟೈಂನಲ್ಲೂ ನಾವು ಕೆಲಸವನ್ನು ಎಂಜಾಯ್ ಮಾಡಕೊಂಡು ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.