ಬಿಸಿಲ ಬೇಗೆ ತಾಳಲಾರದೇ ಬಟ್ಟೆ ಶೋ ರೂಂಗೆ ಎಂಟ್ರಿ ಕೊಟ್ಟ ಹಸು..!ಲಾಭದಲ್ಲಿ ಶೋರೂಂ ಮಾಲೀಕ..!

ಜಗತ್ತಿನ ತಾಪಮಾನ ದಿನದಿಂದ ದಿನಕ್ಕೆ ಏರು ಪೇರು ಆಗುತ್ತಿದ್ದು.. ಒಂದು ದಿನ ವಿಪರೀತ ಮಳೆ ಇದ್ರೆ, ಇನ್ನೊಂದು ದಿನ ಬಿಸಿಲ ಬೇಗೆ ತಾಳಲು ಸಾಧ್ಯವಾಗುವುದಿಲ್ಲ, ಇನ್ನು ದಕ್ಷಿಣ ಭಾರತದಲ್ಲಿ ಕೆಲವೆಡೆ ಅತಿ ಮಳೆಯಿಂದ ಹಾನಿಯಾಗಿದ್ರೆ, ಇನ್ನು ಕೆಲವೆಡೆ ಬರಗಾಲ ಛಾಯೆ ಬೀರಿದೆ, ಇನ್ನು ಕೆಲವೆಡೆ ನೀರಿಗಾಗಿ ಪರಿತಪಿಸುತ್ತಿದ್ದಾರೆ.. ಆದ್ರೆ ಇಲ್ಲೊಂದು ಹಸು ಬಿಸಿಲ ಬೇಗೆ ತಾಳಲಾರದೇ ಬಟ್ಟೆ ಶೋ ರೂಂನಲ್ಲಿ ಆಶ್ರಯ ಪಡೆಯುತ್ತಿರೋ ಘಟನೆಯೊಂದು ಆಂಧ್ರ ಪ್ರದೇಶದ, ಕಡಪ ಜಿಲ್ಲೆಯ ಮೈಡುಕುರು ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಶ್ರೀ ಸಾಯಿ ರಾಮ್‌ ಬಟ್ಟೆ ಶೋರೂಂ ನಲ್ಲಿ ಬಿಸಿಲ ಬೇಗೆ ಫ್ಯಾನ್‌ ಕೆಳಗೆ ಕೂತು ವಿಶ್ರಾಂತಿ ಪಡೆಯುತ್ತಿದೆ ಒಂದು ಹಸು, ಸತತ ಆರು ತಿಂಗಳಿಂದ ಈ ಘಟನೆ ನಟೆಯುತ್ತಿದ್ದು, ಪ್ರತಿದಿನ ಈ ಹಸು 2 ರಿಂದ 3 ಘಂಟೆಯ ವರೆಗೆ ಈ ಬಟ್ಟೆ ಶೋರೂಂನಲ್ಲಿ ಫ್ಯಾನ್‌ ಕೆಳಗೆ ಕುಳಿತು ಧಣಿವನ್ನು ನಿವಾರಿಸಿಕೊಳ್ಳುತ್ತಿದೆಯಂತೆ, ಇನ್ನು ಈ ಬಗ್ಗೆ ಮಾತನಾಡಿರುವ ಬಟ್ಟೆ ಅಂಗಡಿಯ ಮಾಲೀಕ ಪಾಲಿಮರ್‌ ಓಬಯ್ಯ..

ಒಂದು ದಿನ ಈ ಹಸು ಏಕಾ ಏಕಿ ಬಟ್ಟೆ ಅಂಗಡಿಯ ಒಳಗೆ ನುಗ್ಗಿತು, ನಾವು ಎಷ್ಟೇ ಹೊರಗೆ ಹಾಕಲು ನೋಡಿದ್ರು ಅದು ಹೋಗಲಿಲ್ಲ, ಅದು ಅಂಗಡಿಯ ಫ್ಯಾನ್‌ ಕೆಳಗೆ ಕುಳಿತು ಧಣಿವನ್ನು ನಿವಾರಿಸಿಕೊಂಡು ಆ ನಂತರ ಅದು ಎದ್ದು ಹೋಯಿತು..ಅಲ್ಲದೇ ಇದು ಯಾರಿಗೂ ತೊಂದರೆಯನ್ನು ಸಹ ನೀಡದೆ ತನ್ನ ಧಣಿವು ಕಡಿಮೆಯಾದ ಕೂಡಲೇ ಅದು ತನ್ನ ಪಾಡಿಗೆ ಎದ್ದು ಹೋಗುತ್ತದೆ ಅನ್ನೋ ಮಾತುಗಳನ್ನುಆಡದ ಮಾಲೀಕ.. ಇನ್ನು ಹಸು ಬರುವ ವೇಳೆ ಅದಕ್ಕಾಗಿ ಕುಳಿತುಕೊಳ್ಳಲು ಬಟ್ಟೆಯ ವ್ಯವಸ್ಥೆಗಳನ್ನು ಸಹ ಈಗ ಮಾಡಲಾಗಿದೆ, ಆರು ತಿಂಗಳಿಂದ ಈ ಪ್ರಕ್ರಿಯೇ ನಡೆಯುತ್ತಿದ್ದು, ಈಗ ನನ್ನ ಅಂಗಡಿಯನ್ನು ಹುಡುಕಿಕೊಂಡು ಬರುತ್ತಾರೆ, ಅಲ್ಲದೇ ಹಸು ಅಂಗಡಿ ಎಲ್ಲಿದೆ ಅಂತ ಕೇಳುತ್ತಿದ್ದಾರೆ.ಇನ್ನು ಅಂಗಡಿಗೆ ಬರುವ ಪ್ರತಿಯೊಬ್ಬರು ಅದಕ್ಕೆ ಬಾಳೆ ಹಣ್ಣುಗಳನ್ನು ನೀಡಿ ನಮಸ್ಕರಿಸಿಕೊಳ್ಳುತ್ತಾರೆ. ಇನ್ನೊಂದು ವಿಶೇಷವೇನೆಂದರೆ ಈ ಹಸು ನಮ್ಮ ಅಂಗಡಿಯಲ್ಲಿ ಬಂದು ಕೂರಲು ಪ್ರಾರಂಭಿಸಿದ ಮೇಲೆ ನನ್ನ ಅಂಗಡಿಯ ವ್ಯಾಪಾರವೂ ಸಹ ಅಭಿವೃದ್ಧಿಯಾಗಿದ್ದು ತುಂಬಾ ಖುಷಿ ಕೊಟ್ಟಿದೆ ಅಂತ ಹೇಳುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top