ಬಿಜೆಪಿ ಸಂಸದರಿಗೆ ಅಮಿತ್ ಶಾ ಶಾಕ್..!

ಸಂಸತ್ ನಲ್ಲಿ ಮಹತ್ವದ ಶಾಸನಗಳ ಮಂಡನೆ ಇರುವುದರಿಂದ ಎಲ್ಲಾ ಸಂಸದರಿಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮೂರು‌ ದಿನಗಳ ಕಾಲ ವಿಪ್ ಜಾರಿಗೊಳಿಸಿದ್ದಾರೆ. ಇಂದಿನಿಂದ ಲೋಕಸಭೆಯಲ್ಲಿ ಮಹತ್ವದ ಶಾಸನಗಳ ಚರ್ಚೆಯಾಗಲಿದ್ದು ಎಲ್ಲಾ ಸಂಸದರು ಸರ್ಕಾರದ ಜೊತೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ವಿಪ್ ಜಾರಿಗೊಳಿಸಲಾಗಿದ್ದು. ಇಂದು ಅಮಿತ್ ಶಾ ಪೌರತ್ವದ ತಿದ್ದುಪಡಿಯನ್ನು ಮಂಡಿಸಲಿದ್ದಾರೆ‌.

ಪಾಕ್,ಅಫ್ಘಾನ್,ಬಾಂಗ್ಲಾ ದೇಶದ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿಮಾಡಲು ಉದ್ದೇಶಿಸಿದ್ದು, ಇದಕ್ಕೆ ಬಳಹ ವಿರೋಧ ಕೂಡ ವ್ಯಕ್ತವಾಗಿದೆ. ಹಾಗಾಗಿ ಮತದಾನದ ಸಮಯದಲ್ಲಿ ಮಾತ್ರ ವಿಪ್ ಜಾರಿಗೊಳಿಸುತ್ತಿದ್ದರು, ಆದ್ರೆ ಈ ಬಾರಿ ಶಾಸನ ಮಂಡನೆ ವೇಳೆ ಎಲ್ಲಾ ಸಂಸದರು ಹಾಜರಿರಬೇಕು ಅನ್ನೋ ಉದ್ದೇಶಕ್ಕೆ ಬಿಜೆಪಿ‌ ಸಂಸದರಿಗೆ ವಿಪ್ ಜಾರಿಗೊಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top