ಬಿಗ್ ಬಾಸ್ ನಲ್ಲಿ ದಾಖಲೆ ಬರೆದ ಕಿಚ್ಚ ಸುದೀಪ್..!

ಬಿಗ್ ಬಾಸ್ ಕಿರುತೆರೆಯ ಅತಿ‌ದೊಡ್ಡ‌ ಮತ್ತು ಜನಪ್ರಿಯ ರಿಯಾಲಿಟಿ ಶೋ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಆರಂಭವಾಗಲಿದ್ದು, ಬಿಗ್ ಬಾಸ್ ಮನೆಯೊಳಗೆ ಯಾರ್ಯಾರು ಹೋಗ್ತಾರೆ ಅನ್ನೋ ಚರ್ಚೆಗಳು ಶುರುವಾಗಿದೆ, ಆದ್ರೆ ಈ ಎಲ್ಲಾ ಚರ್ಚೆಗಳ ನಡುವೆ ಈಗ ಕಿಚ್ಚ ಸುದೀಪ್ ಹೊಸದೊಂದು ದಾಖಲೆ ಬರೆದಿದ್ದಾರೆ, ಬಿಗ್ ಬಾಸ್ ನಾಲ್ಕು ಭಾಷೆಯಲ್ಲೂ ಆಗದ ಹೊಸದೊಂದು ದಾಖಲೆಯನ್ನು ಈಗ‌ ಕಿಚ್ಚ ಸುದೀಪ್ ಮಾಡಿದ್ದಾರೆ.

ಹೌದು ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 7ರ ವರೆಗೆ ಸತತವಾಗಿ ಆ್ಯಂಕರಿಂಗ್ ಮಾಡೋ ಮೂಲಕ ಬೇರೆ ಯಾವ ಭಾಷೆಯಲ್ಲೂ ಆಗದ ದಾಖಲೆಯನ್ನು ನಿರ್ಮಿಸಿದ್ದಾರೆ, ಹಿಂದಿಯಲ್ಲಿ ಸಲ್ಮಾನ್ ಖಾನ್ ಸತತವಾಗಿ ಶೋ ನಡೆಸಿಕೊಂಡು ಬಂದ್ರು ಮಧ್ಯದಲ್ಲಿ ಬ್ರೇಕ್ ಆಗೋ ಮೂಲಕ ಅಮಿತಾಭ್ ಮತ್ತು ಸಂಜಯ್‌ದತ್ ಸೇರಿದಂತೆ ಶಿಲ್ಪಾ ಶೆಟ್ಟಿ ಕೂಡ ಹಿಂದಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ರು, ಇನ್ನು ತೆಲುಗಿನಲ್ಲಿ ಬಿಗ್ ಬಾಸ್ ಕೇವಲ ಮೂರು ಸೀಸ‌ನ್ ಈಗ ನಡೆದಿದ್ದು ನಡೆದ ಮೂರು ಸೀಸನ್ ಶೋನಲ್ಲೂ ಒಬ್ಬೊಬ್ಬರು ಆ್ಯಂಕರ್ ಬದಲಾಗಿದ್ದಾರೆ. ಆದ್ರೆ ಕನ್ನಡದಲ್ಲಿ ಸತತ 7 ಸೀಸನ್ ನಲ್ಲಿ ಕಿಚ್ಚ ಸುದೀಪ್ ಆವರೇ ಕಾರ್ಯಕ್ರಮ ನಡೆಸಿಕೊಡೋ ಮೂಲಕ ಬಿಗ್ ಬಾಸ್ ಗೂ ಸಹ ನಾನೇ ಪೈಲ್ವಾನ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top