ಬಿಗ್‍ಬಾಸ್ ಸೀಸನ್ 7ಗೆ ರವಿಬೆಳಗೆರೆ ಹೋಗೋದು ಪಕ್ಕಾ..!

ಬಿಗ್‍ಬಾಸ್ ಕನ್ನಡ ಸೀಸನ್ 7 ಶುರುವಾಗಲು ಇನ್ನು ಕೇವಲ 2 ದಿನಗಳಿವೆಯಷ್ಟೇ ಆದ್ರೆ ಬಿಗ್‍ಬಾಸ್ ಮನೆಯಲ್ಲಿ ಯಾವ್ಯಾವ ಸೆಲೆಬ್ರಿಟಿಗಳು ಇರ್ತಾರೆ ಅನ್ನೋದು ಮಾತ್ರ ಎಲ್ಲರಲ್ಲೂ ಇರೋ ಕುತೂಹಲ, ಅಲ್ಲದೇ ಕೆಲವೊಂದಿಷ್ಟು ಹೆಸರುಗಳು ಸಹ ವೈರಲ್ ಆಗಿ ಹೋಗಿದೆ, ಅದರಲ್ಲಿ ಪ್ರಮುಖವಾಗಿ ಪತ್ರಕರ್ತ ರವಿ ಬೆಳಗೆರೆ ಸಹ ಈ ಬಾರಿಯ ಬಿಗ್‍ಬಾಸ್ ಮನೆಗೆ ಹೋಗ್ತಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇತ್ತು, ಇನ್ನು ಈ ವಿಚಾರವಾಗಿ ಎಲ್ಲೂ ಮಾತನಾಡಿರದ ರವಿ ಬೆಳಗೆರೆ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋದು ಕನ್ಫರ್ಮ್ ಅನ್ನುತಿದೆ ರವಿ ಬೆಳೆಗೆರೆಯವರ ಆಪ್ತ ಮೂಲ.

ರವಿ ಬೆಳೆಗೆರೆಯವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗ್ತಾರೆ ಅವರಿಗೆ ಆಫರ್ ಬಂದಿದೆ ಅನ್ನೋ ಮಾತುಗಳನ್ನು ಹೇಳ್ತಾ ಇದ್ದಾರೆ ಅವರ ಆಪ್ತರು, ಆದ್ರೆ ಅವರು ಸ್ಪರ್ಧಿಯಾಗಿ ಎಂಟ್ರಿ ಕೊಡ್ತಾರಾ ಅಥವಾ ವೈಲ್ಡ್ ಕಾರ್ಡ್ ಎಂಟ್ರಿ ಪಡೀತಾರಾ ಅನ್ನೋದು ಸದ್ಯ ಎಲ್ಲರಲ್ಲೂ ಮಾಡಿರೋ ಕುತೂಹಲ ಅದೇನೆ ಇದ್ರು ರವಿ ಬೆಳಗೆರೆಯವರು ಬಿಗ್‍ಬಾಸ್ ಮನೆಯಲ್ಲಿ ಎಂಟ್ರಿ ಕೊಟ್ರೆ ಅವರು ಎಷ್ಟು ದಿನ ಇರಬಹುದು ಅನ್ನೋ ಲೆಕ್ಕಾಚಾರಗಳು ಸಹ ಶುರುವಾಗಿದೆ, ಒಟ್ಟಿನಲ್ಲಿ ಬಿಗ್‍ಬಾಸ್ ಶುರುವಾಗಲು ಇನ್ನು ಕೇವಲ 2 ದಿನ ಇರುವಾಗ ರವಿ ಬೆಳಗೆರೆ ಅವರ ಹೆಸರು ಕೇಳಿ ಬರ್ತಾ ಇರೋದು ಬಿಗ್‍ಬಾಸ್ ಶೋ ಪ್ರಿಯರಿಗೆ ಈ ಬಾರಿಯ ಬಿಗ್‍ಬಾಸ್ ಶೋ ಇನ್ನಷ್ಟು ಕುತೂಹಲ ಹೆಚ್ಚಿಸೋದಂತು ಗ್ಯಾರಂಟಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top