ಬಿಗ್‍ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳು ಇವರೇ ನೋಡಿ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಈ ವರ್ಷ ಕೊರೋನಾ ಎಫೆಕ್ಟ್‌ನಿಂದಾಗಿ ಆರಂಭವಾಗಲಿಲ್ಲ, ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ ೮ ಯಾವಾಗ ಶುರುವಾಗಲಿದೆ ಅನ್ನೋ ಪ್ರಶ್ನೆಗೆ ಮುಂದಿನ ವರ್ಷ ಜನವರಿ ಮೂರನೇ ವಾರದಲ್ಲಿ ಆರಂಭ ವಾಗಲಿದೆ ಅನ್ನೋ ಉತ್ತರ ಸಿಕ್ಕಿದೆ, ಈಗಾಗಲೇ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಬಿಗ್‌ಬಾಸ್‌ ಮನೆಯ ಕೆಲಸ ಶುರುವಾಗಿದ್ದು, ಬಿಗ್‌ಬಾಸ್‌ ಮನೆ ಈ ಬಾರಿ ಹೊಸ ಕಾನ್ಸೆಪ್ಟ್‌ನೊಂದಿಗೆ ಸ್ಪರ್ಧಿಗಳನ್ನು ಬರಮಾಡಿಕೊಳ್ಳಲಿದೆ.

ಈಗಾಗಲೇ ಬಿಗ್‌ಬಾಸ್‌ ಜನವರಿಯಲ್ಲಿ ಶುರುವಾಗಲಿದೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ಈ ಬಾರಿ ಬಿಗ್‌ಬಾಸ್‌ ಮನೆಗೆ ಯಾರೆಲ್ಲಾ ಎಂಟ್ರಿಕೊಡಬಹುದು, ಈ ಬಾರಿ ಕಾಮನ್‌ ಮ್ಯಾನ್‌ಗೆ ಎಂಟ್ರಿ ಸಿಗಲಿದ್ಯ ಅನ್ನೋ ಚರ್ಚೆ ಜೋರಾಗಿ ಶುರುವಾಗಿದೆ. ಸದ್ಯ ಸೆಲೆಬ್ರಿಟಿ ವಿಚಾರದಲ್ಲಿ ಯಾರೆಲ್ಲಾ ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಇದೀಗ ಒಂದಿಷ್ಟು ಜನ ಸೆಲೆಬ್ರಿಟಿಗಳ ಹೆಸರು ಬಿಗ್‌ಬಾಸ್‌ ವಿಚಾರದಲ್ಲಿ ಕೇಳಿ ಬರ್ತಾ ಇದೆ.

ಹಾಗಾದ್ರೆ ಈ ಬಾರಿ ಯಾವೆಲ್ಲಾ ಸೆಲೆಬ್ರಿಟಿಗಳು ಬಿಗ್‌ಬಾಸ್‌ ಮನೆಯೊಳಗೆ ಹೋಗಬಹುದು ಅನ್ನೋದನ್ನ ನೋಡೋದಾದ್ರೆ. ಎಕ್ಸ್‌ಕ್ಯೂಸ್‌ಮಿ ಖ್ಯಾತಿ ಸುನೀಲ್‌ ರಾವ್‌ ಈ ಬಾರಿಯ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಅಂತ ಹೇಳಲಾಗುತ್ತಿದೆ. ಕಳೆದ ಸೀಸನ್‌ನಲ್ಲಿಯೇ ಸುನೀಲ್‌ ಹೋಗ್ತಾರೆ ಅಂತ ಹೇಳಲಾಗುತ್ತಿತ್ತು, ಆದ್ರೆ ಈ ಬಾರಿ ಕೂಡ ಬಿಗ್ಬಾಸ್‌ ಟೀಂ ಸುನೀಲ್‌ ರಾವ್‌ ಅವರನ್ನು ಅಪ್ರೋಚ್‌ ಮಾಡಿದೆ ಅಂತ ಹೇಳಲಾಗುತ್ತಿದೆ.

ಇನ್ನು ಈ ಬಾರಿ ಸೋಶಿಯಲ್‌ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್‌ ಆದ ವ್ಯಕ್ತಿ ಅಂದ್ರೆ ಅದು ಡ್ರೋನ್‌ ಪ್ರತಾಪ್‌ , ಹೌದು ಡ್ರೋನ್‌ ಪ್ರತಾಪ್‌ ಕೂಡ ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಬಹುದು ಅನ್ನೋ ಮಾತುಗಳಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿರೋ ಆಧಾರದಲ್ಲಿ ಈ ಬಾರಿ ಡ್ರೋನ್‌ ಪ್ರತಾಪ್‌ ಅವರನ್ನು ಬಿಗ್‌ಬಾಸ್‌ ಮನೆಗೆ ಕಳುಹಿಸಬಹುದು ಅನ್ನೋ ಮಾತಿದೆ.

ಇನ್ನು ಕಾಮಿಡಿ ಕಿಲಾಡಿಗಳು ಮೂಲಕ ಮೋಡಿ ಮಾಡಿದ್ದ ಶಿವರಾಜ್‌ ಕೆಆರ್‌ ಪೇಟೆ ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಅನ್ನೊ ಮಾತುಗಳು ಕೇಳಿ ಬರುತ್ತಿದ್ದು, ಕಳೆದ ಸೀಸನ್‌ನಲ್ಲಿ ಬಿಗ್‌ಬಾಸ್‌ ಮನೆಗೆ ಹೋಗುತ್ತಿರಾ ಅನ್ನೋ ಪ್ರಶ್ನೆಗೆ ಸದ್ಯ ನಾನು ಬಿಗ್‌ಬಾಸ್‌ ಮನೆಗೆ ಕೆಲವು ಸೀಸನ್‌ ಹೋಗೋ ಮನಸ್ಸು ಮಾಡೋದಿಲ್ಲ ಅಂತಾನೂ ಹೇಳಿದ್ರು, ಈ ಬಾರಿ ಕೂಡ ಅವರ ಹೆಸರು ಕೇಳಿ ಬರ್ತಾ ಇದ್ದು, ಬಿಗ್‌ಬಾಸ್‌ ಮನೆಗೆ ಶಿವರಾಜ್‌ ಕೆಆರ್‌ ಪೇಟೆ ಹೋದರು ಅಚ್ಚರಿ ಇಲ್ಲ.

ಇನ್ನು ಕಾಮಿಡಿ ಕಿಲಾಡಿಯ ಇನ್ನೊಬ್ಬ ಪ್ರತಿಭೆ ನಯನ ಹೆಸರು ಕೂಡ ಈ ಬಾರಿಯ ಬಿಗ್‌ಬಾಸ್‌ ಲಿಸ್ಟ್‌ನಲ್ಲಿ ಕೇಳಿ ಬರ್ತಾ ಇದ್ರೆ, ಇತ್ತ ಬೆಳ್ಳಿ ತೆರೆಯಲ್ಲಿ ಸಖತ್‌ ಹೆಸರು ಮಾಡಿರೋ ಡಾಕ್ಟರ್‌ ವಿಠಲ್‌ ರಾವ್‌ ಫೇಮಸ್‌ ಇನ್‌ ಸರ್ಜರಿ ಇನ್‌ ಭರ್ಜರಿ ಅನ್ನೋ ಡೈಲಾಗ್‌ ಮೂಲಕ ಮನೆಮಾತಾಗಿದ್ದ ನಟ ರವಿಶಂಕರ್‌ ಮತ್ತು ನಟ ರಘು ಭಟ್‌ ಅವರ ಹೆಸರು ಕೂಡ ಈ ಬಾರಿ ಕೇಳಿ ಬರ್ತಾ ಇದೆ.

ಇವರ ಜೊತೆಯಲ್ಲಿ ನಂಬರ್‌ ಅಂದ್ರೆ ನಾನು, ನಾನು ಅಂದ್ರೆ ನಂಬರ್‌ ಅಂತ ಸಂಖ್ಯಾ ಶಾಸ್ತ್ರ ಹೇಳೋ ಆರ್ಯವರ್ಧನ್‌ ಕೂಡ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ. ಅಷ್ಟೇ ಅಲ್ಲದೇ ಇವರ ಜೊತೆಯಲ್ಲಿ ಟಿಕ್‌ಟಾಕ್‌ ಸ್ಟಾರ್‌ಗಳಾದ ಬಿಂದು ಗೌಡ, ಸೋನು ಶ್ರೀನಿವಾಸ್‌ ಗೌಡ, ಧನು ಶ್ರೀ ಹೆಸರು ಕೂಡ ಕೇಳಿ ಬರ್ತಾ ಇದ್ದು. ಇವರ ಜೊತೆಯಲ್ಲಿ ಶಿವಪುತ್ರ ಕಾಮಿಡಿ ಯೂಟ್ಯೂಬರ್‌ ಮತ್ತು ಮತ್ತೊಬ್ಬ ಯೂಟ್ಯೂಬರ್‌ ರಘು ವೇನ್‌ ಸ್ಟೋರ್‌ ಅವರ ಹೆಸರು ಕೂಡ ಕೇಲಿ ಬರ್ತಾ ಇದೆ . ಬಿಗ್‌ಬಾಸ್‌ ಟೀಂ ಯಾರನ್ನು ಅಪ್ರೊಚ್‌ ಮಾಡಿದ್ಯಂತೆ ಸದ್ಯ ಯಾರು ಫೈನಲ್‌ ಅಗಿಲ್ಲ ಅನ್ನೋ ಮಾಹಿತಿ ಇದೆ.

ಸದ್ಯ ಇವರುಗಳ ಹೆಸರು ಬಿಗ್‌ಬಾಸ್‌ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಮುಂಚುಣಿಯಲ್ಲಿ ಇದ್ದು, ಯಾರೆಲ್ಲಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡಲಿದ್ದಾರೆ ಅನ್ನೋ ಮಾಹಿತಿ ಸದ್ಯ ಬಿಗ್‌ಬಾಸ್‌ ತಂಡವೇ ನೀಡಬೇಕು.

ಈ ಬಾರಿಯ ಬಿಗ್‌ಬಾಸ್‌ ಸೀಸನ್‌ ೮ರಲ್ಲಿ ನಿಮ್ಮ ಪ್ರಕಾರ ಯಾವ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಕಾಣಬೇಕು. ಈ ವಿಡಿಯೋದಲ್ಲಿರೋ ಯಾವ ಸ್ಪರ್ಧಿ ನಿಮ್ಮ ಫೇವರೆಟ್‌ ಯಾವ ಸ್ಪರ್ಧಿ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರನ್ನು ಎಂಟರ್‌ಟೈನ್‌ ಮಾಡಬಹುದು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top