ಬಿಗ್‌ಬ್ಯಾಶ್‌ ಲೀಗ್‌ ಆಡ್ತಾರ ಯುವರಾಜ್‌ ಸಿಂಗ್‌..!

ಆಸ್ಟ್ರೇಲಿಯಾದ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಸಿಕ್ಸರ್‌ ಯುವರಾಜ್‌ ಸಿಂಗ್‌ ಆಡಲಿದ್ದಾರಾ.ಇದಕ್ಕಾಗಿ ಯುವಿ ಆಸ್ಟ್ರೇಲಿಯಾ ಪ್ರವಾಸ ಬೆಳಸಲಿದ್ದಾರ ಅನ್ನೋ ಮಾತುಗಳು ಈಗ ಕೇಳಿ ಬರ್ತಾ ಇದೆ. ೨೦೧೯ರಲ್ಲಿ ಅಂತರ್‌ರಾಷ್ಟ್ರೀಯ ಮತ್ತು ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದ ಯುವಿ, ಬಿಸಿಸಿಐ ಅನುಮತಿ ಪಡೆದು ಗ್ಲೋಬಲ್‌ ಟಿ 20ಲೀಗ್‌ ಕೆನಡಾ ಮತ್ತು ಟಿ-10ಲೀಗ್‌ ಅಬುಧಾಬಿ ಟೂರ್ನಿಗಳಲ್ಲಿ ಭಾಗವಹಿಸಿದ್ದರು.ಹೀಗಾಗಿ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ಬ್ಯಾಶ್‌ ಟೂರ್ನಿಯಲ್ಲಿ ಭಾಗವಹಿಸಲು ಯುವಿ ತೀರ್ಮಾನಿಸಿದ್ದು, ಬಿಗ್‌ಬ್ಯಾಶ್‌ ಟೀಂ ಪ್ರಾಂಚೈಸಿಗಳು ಸಹ ಯುವಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇನ್ನು ಡಿಸೆಂಬರ್‌ ೩ರಿಂದ ಶುರುವಾಗಲಿರೋ ಬಿಗ್‌ಬ್ಯಾಶ್‌ ಲೀಗ್‌ಗೆ ಯುವಿ ಭಾಗವಹಿಸ್ತಾರ ಕಾದುನೋಡಬೇಕು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top