ಬಿಗ್‌ಬಾಸ್‌ ಸ್ಪರ್ಧಿಗೆ ಆ ವ್ಯಕ್ತಿಯಿಂದ ಲೈಂಗಿಕ ಕಿರುಕುಳ..!

ಬಿಗ್‌ಬಾಸ್‌ ಶೋ ದಿನದಿಂದ ದಿನಕ್ಕೆ ರೋಚಕತೆ ಕಂಡುಕೊಳ್ತಾ ಇದೆ. ಇದೇ ವೇಳೆ ಬಿಗ್‌ಬಾಸ್‌ ದಿನಕ್ಕೊಂದು ಟಾಸ್ಕ್‌ಗಳನ್ನು ನೀಡುತ್ತಿದ್ದು, ಸ್ಪರ್ಧಿಗಳು ಸಹ ಸಖತ್‌ ಆಗಿ ಎಂಟರ್‌ಟೈನ್‌ ಮಾಡ್ತಾ ಇದ್ದಾರೆ. ಅಲ್ಲದೇ ಬಿಗ್‌ಬಾಸ್‌ ಮನೆಯಿಂದ ಒಂದಿಲ್ಲೊಂದು ವಿಷಯಗಳು ಹೊರ ಬೀಳ್ತಾನೆ ಇರ್ತಾವೆ. ಈಗ ಅಂತಹದ್ದೇ ಒಂದು ವಿಷಯ ಈಗ ಬಿಗ್‌ಬಾಸ್‌ ಮನೆಯಿಂದ ಹೊರ ಬಿದ್ದಿದೆ. ಬಿಗ್‌ಬಾಸ್‌ ಸ್ಪರ್ಧಿಯಾಗಿರೋ ಕಿಶನ್‌ಗೆ ಲೈಂಗಿಕ ಕಿರುಕುಳವಾಗಿತ್ತು ಅನ್ನೋ ಸುದ್ದಿ ಈಗ ಹೊರ ಬಿದ್ದಿದೆ. ಇನ್ನು ಈ ಸುದ್ದಿಯನ್ನು ಕಿರುತೆರೆ ನಟಿ ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ. ಹೌದು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ನೀಡಿದ್ದು, ಈ ಟಾಸ್ಕ್‌ನ ಅನುಸಾರ ಜೋಡಿಯಾಗಿ ಈ ಟಾಸ್ಕ್‌ನಲ್ಲಿ ಭಾಗವಹಿಸಬೇಕಾಗಿತ್ತು, ಇನ್ನು ತಮ್ಮ ಜೋಡಿಯ ವೈಯುಕ್ತಿಕ ಜೀವನದ ಬಗ್ಗೆ ಮನೆಯವರಿಗೆ ತಿಳಿಸಬೇಕಾಗಿತ್ತು.

ಆಗ ಕಿಶನ್‌ ಜೋಡಿಯಾಗಿದ್ದ ಪ್ರಿಯಾಂಕ , ಕಿಶನ್‌ ಅವರು ತಮ್ಮ 16ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ರು ಅನ್ನೋ ಮೂಲಕ ಬಿಗ್‌ಬಾಸ್‌ ಮನೆಯವರಿಗೆ ಶಾಕ್‌ ನೀಡಿದ್ದಾರೆ. ಹೌದು ಕಿಶನ್‌ಗೆ ಡ್ಯಾನ್ಸರ್‌ ಆಗಬೇಕು ಅನ್ನೋ ಆಸೆ ಯಾವತ್ತು ಇರಲಿಲ್ಲ, ಆದ್ರೆ ಅವರ ತಾಯಿಗೆ ಡ್ಯಾನ್ಸರ್‌ ಆಗಬೇಕು ಅನ್ನೋ ಆಸೆ ಇದ್ದುದ್ದರಿಂದ ಶಾಲೆಗೆ ಹೋಗುವಾಗ ನೀನೂ ಡ್ಯಾನ್ಸರ್‌ ಆಗ ಬೇಕು ಅಂತ ಹೇಳುತ್ತಿದ್ದರಂತೆ. ಅಲ್ಲದೇ ಕಿಶನ್‌ನನ್ನು ಬಾಂಬೆಗೂ ಕೂಡ ಕಳುಹಿಸಿದ್ದಾರಂತೆ, ತಮ್ಮ ತಾಯಿಗೋಸ್ಕರ ತಮ್ಮ ಎಲ್ಲಾ ಆಸೆಗಳನ್ನು ಬಿಟ್ಟು 16ನೇ ವಯಸ್ಸಿಗೆ ಬಾಂಬೆಗೆ ಹೋಗುವುದಾಗಿ ಮನಸ್ಸು ಮಾಡಿ ಯಾರಾದರು ಡ್ಯಾನ್ಸರ್‌,ಆಕ್ಟರ್‌ ಆಗುತ್ತೇನೆ ಎಂದರೆ ಕಿಶನ್‌ ಅವರ ಜೊತೆ ಹೋಗುತ್ತಿದ್ದರು. ಇದೇ ವೇಳೆ ಒಬ್ಬ ವ್ಯಕ್ತಿ ಕಿಶನ್‌ ಅವರನ್ನು ನಿನ್ನನ್ನು ಡ್ಯಾನ್ಸರ್‌ ಮಾಡುತ್ತೇನೆ ಎಂದು ಅವರ ಜೊತೆ ಕರೆದುಕೊಂಡು ಹೋಗಿ ಕಿಶನ್‌ಗೆ ಲೈಂಗಿಕ ಕಿರುಕುಳ ನೀಡಿದ್ದರು. ಆದರೆ ಕಿಶನ್‌ಗೆ ಆ ವಯಸ್ಸಿನಲ್ಲಿ ಹೇಗೆ ತಡೆಯಬೇಕು ಎಂಬುದು ಗೊತ್ತಿರಲಿಲ್ಲ, ಪ್ರತಿ ಬಾರಿ ಆ ವ್ಯಕ್ತಿಯ ಕಿರುಕುಳ ನೀಡುತ್ತಿದ್ದಾಗ ಕಿಶನ್‌ ತಪ್ಪಿಸಿಕೊಂಡಿದ್ದರು. ಈ ವಿಷಯವನ್ನು ಅವರು ತಮ್ಮ ಲಾಸ್ಟ್‌ ಗರ್ಲ್‌ ಫ್ರೆಂಡ್‌ ಬಳಿ ಹೇಳಿಕೊಂಡಿದ್ದರು. ಕಿಶನ್‌ ತುಂಬಾ ಹುಡುಗಿಯರೊಂದಿಗೆ ಡೇಟ್‌ ಮಾಡಿದ್ದು, ಕೆಲವರು ನಿನ್ನ ಬಳಿ ಏನಿದೆ ಎಂದು ಅವಮಾನ ಮಾಡಿದ್ದಾರೆ. ಇನ್ನು ಕಿಶನ್‌ ಎಲ್ಲರ ಜೊತೆ ಕ್ಲೋಸ್‌ ಆಗಿ ಇದ್ದರು ಅವರು ಏಕಾಂಗಿಯಾಗಿಯೇ ಇರುತ್ತಾರೆ ಎಂದು ಪ್ರಿಯಾಂಕ ಮನೆವರಿಗೆ ಹೇಳುವ ಮೂಲಕ ಕಿಶನ್‌ ಅವರ ನಿಜ ಜೀವನದ ಘಟನೆಯನ್ನು ಅನಾವರಣ ಮಾಡಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top