ಬಿಗ್‌ಬಾಸ್‌ಗೆ ಹೋಗಲು ಅವಕಾಶ ಕೊಟ್ರೆ ಖಂಡಿತ ಹೋಗ್ತೀನಿ -ಹುಚ್ಚಾ ವೆಂಕಟ್‌..

ಸ್ಯಾಂಡಲ್‌ವುಡ್‌ನಲ್ಲಿ ಹುಚ್ಚಾ ವೆಂಕಟ್‌ ಅಂತಾನೇ ಫೇಮಸ್‌ ಆಗಿರೋ ವೆಂಕಟ್‌ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹುಚ್ಚಾ ವೆಂಕಟ್‌ ಸಿನಿಮಾ ರಿಲೀಸ್‌ ಟೈಂನಲ್ಲಿ ಥಿಯೇಟರ್‌ಗೆ ಯಾರು ಬರಲಿಲ್ಲ ಅಂತ ಸಿನಿ ಪ್ರೇಕ್ಷಕರನ್ನು ಎಕ್ಕಾಮಕ್ಕಾ ಕ್ಲಾಸ್‌ ತೆಗೆದುಕೊಂಡಿದ್ದ ವೆಂಕಟ್‌ ನಂತರ ರಮ್ಯಾ ವಿಚಾರದಲ್ಲೂ ಒಂದಿಷ್ಟು ಸುದ್ದಿಯಾಗಿದ್ರು, ಆ ನಂತರದಲ್ಲಿ ಅಲ್ಲಿ ಇಲ್ಲಿ ಕೆಲವೊಂದು ವಿಡಿಯೋದಲ್ಲಿ ತಮ್ಮ ಮನಸಿಗೆ ಬಂದ ರೀತಿ ಬೈಯುವ ಮೂಲಕ ಸುದ್ದಿಯಾಗುತ್ತಿದ್ದ ಹುಚ್ಚಾ ವೆಂಕಟ್‌ ನಂತರ ಕಾಣಿಸಿಕೊಂಡಿದ್ದು ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿ ಕೆಲವು ಕಾಲ ಆಟವಾಡಿದ್ದ ಹುಚ್ಚಾ ವೆಂಕಟ್‌ ಬಿಗ್‌ಬಾಸ್‌ ಸೀಸನ್‌ ೩ರಲ್ಲಿ ರವಿ ಮೂರುರು ಅವರ ಮೇಲೆ ಹಲ್ಲೆ ಮಾಡಿ ಬಿಗ್‌ಬಾಸ್‌ನಿಂದ ಹೊರ ಹಾಕಲ್ಪಟ್ಟಿದ್ರು, ನಂತರ ಹುಚ್ಚ ವೆಂಕಟ್‌ ಅವರನ್ನು ಬಿಗ್‌ಬಾಸ್‌ ಸೀಸನ್‌ 4ರಲ್ಲಿ ಮತ್ತೆ ಪ್ರವೇಶ ಪಡೆದಿದ್ದ ಹುಚ್ಚಾ ವೆಂಕಟ್‌ ಈ ವೇಳೆ ಬಿಗ್‌ಬಾಸ್‌ 4 ವಿನ್ನರ್‌ ಆದ ಒಳ್ಳೇ ಹುಡುಗ ಪ್ರಥಮ್‌ ಮೇಲೆ ಹಲ್ಲೆ ಮಾಡುವ ಮೂಲಕ ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ರು, ಆ ನಂತರದಲ್ಲಿ ಹುಚ್ಚಾ ವೆಂಕಟ್‌ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ನೀಡಲು ಅವಕಾಶ ನೀಡಿರಲಿಲ್ಲ, ಇನ್ನು ಹುಚ್ಚಾ ವೆಂಕಟ್‌ ಮೇಲೆ ಕೆಲವೊಂದು ಕಡೆಯಲ್ಲಿ ಗಲಾಟೆ ವಿಚಾರವಾಗಿ ಕೆಲವೊಂದು ಊರುಗಳಿಲ್ಲ ಹಲ್ಲೆ ಕೂಡ ಮಾಡಲಾಗಿತ್ತು, ಆನಂತರದಲ್ಲಿ ಹುಚ್ಚ ವೆಂಕಟ್‌ ಕಾಣೆಯಾಗಿದ್ರು, ಆದ್ರೆ ಇದೀಗ ಮತ್ತೆ ಹುಚ್ಚಾ ವೆಂಕಟ್‌ ಪ್ರತ್ಯಕ್ಷವಾಗಿದ್ದು, ಅವಕಾಶ ಕೊಟ್ಟ ಮತ್ತೆ ಬಿಗ್‌ಬಾಸ್‌ ಮನೆಯೊಳಗೆ ಹೋಗುತ್ತೇನೆ ಅಂತ ಹೇಳಿದ್ದಾರೆ. ಈಗಾಗಲೇ ಬಿಗ್‌ಬಾಸ್‌ ಕನ್ನಡ ಹೊಸ ಸೀಸನ್‌ ಜನವರಿ 3ನೇ ವಾರದಲ್ಲಿ ಶುರುವಾಗಲಿದೆ ಅನ್ನೋ ಮಾತುಗಳಿದ್ದು, ಈ ಬಾರಿಯಾರೆಲ್ಲಾ ಅಭ್ಯರ್ಥಿಗಳಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಹೀಗಿರುವಾಗ ಇದೀಗ ಹುಚ್ಚಾ ವೆಂಕಟ್‌ ಅವಕಾಶ ಕೊಟ್ಟರೆ ಮತ್ತೆ ಬಿಗ್‌ಬಾಸ್‌ ಮನೆಯೊಳಗೆ ಹೋಗೋದಾಗಿ ಹೇಳಿದ್ದು, ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಯಾವುದೇ ಗಲಾಟೆಗೆ ಅವಕಾಶ ಮಾಡಿಕೊಡುವುದಿಲ್ಲ, ಯಾರ ಮೇಲು ಹಲ್ಲೆ ಮಾಡುವುದಿಲ್ಲ, ಜನರ ಪ್ರೀತಿ ಗಳಿಸುತ್ತೇನೆ ಅಂತ ಹೇಳಿದ್ದಾರೆ. ಇನ್ನು ನನ್ನ ಹೆಸರು ಮುಂದೆ ಹುಚ್ಚಾ ಅಂತ ಸೇರಿಸಿರೋದು ಜನರು ಅವರು ಪ್ರೀತಿಯಿಂದ ಹುಚ್ಚ ವೆಂಕಟ್‌ ಅಂತಾ ಕರೀತಾರೆ ಪ್ರೀತಿಯಿಂದ ಇಟ್ಟಿರೋ ಹೆಸರನ್ನು ನಾನು ತೆಗೆಯೋದಿಲ್ಲ ಅಂತ ಹೇಳಿದ್ದು, ಬಿಗ್‌ಬಾಸ್‌ ಮನೆಗೆ ಹೋಗಲು ಅವಕಾಶ ಕೊಟ್ಟರೆ ಖಂಡಿತ ಹೋಗುತ್ತೇನೆ ಅಂತ ಹೇಳಿದ್ದಾರೆ.

ಹಾಗಾದ್ರೆ ಈ ಬಾರಿಯ ಬಿಗ್‌ಬಾಸ್‌ ಕನ್ನಡದಲ್ಲಿ ನೀವೂ ಹುಚ್ಚಾ ವೆಂಕಟ್‌ ಅವನ್ನು ಮತ್ತೆ ನೋಡಲು ಇಷ್ಟ ಪಡುತ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top