ಬಾಲಿವುಡ್ ಹಾರಿದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

rashmika mandanna love proposal

ಸ್ಯಾಂಡಲ್ವುಡ್ ಬ್ಯೂಟಿ ಕಿರಿಕ್‌ ಬೆಡಗಿ ರಶ್ಮಿಕಾ‌ ಮಂದಣ್ಣ ಟಾಲಿವುಡ್ ಮುಗಿಸಿ ಸದ್ಯದರಲ್ಲೇ ಬಾಲಿವುಡ್ ಗೆ ಹಾರಲಿದ್ದಾರೆ. ಹೌದು‌ ಬಾಲಿವುಡ್ ಕಬೀರ್ ಸಿಂಗ್‌ ಶಾಹಿದ್ ಕಪೂರ್‌ಗೆ ಜೋಡಿಯಾಗಲು ಬಾಲಿವುಡ್ ಪ್ಲೈಟ್ ಹತ್ತಲಿದ್ದಾರೆ ರಶ್ಮಿಕಾ ಮಂದಣ್ಣ . ಶಾಹೀದ್ ಕಪೂರ್ ಟಾಲಿವುಡ್ ನ ನಾಣಿ ಅಭಿನಯದ ಜರ್ಸಿ ಸಿನಿಮಾವನ್ನು ರಿಮೇಕ್ ಮಾಡ್ತಾ ಇದ್ದು ಇದರಲ್ಲಿ ಶಾಹೀದ್ ಹೊಸ ಜೆರ್ಸಿ ತೊಡಲಿದ್ದಾರೆ, ಇನ್ನು ಶಾಹೀದ್ ಗೆ ರಶ್ಮಿಕಾ ಸಾಥ್ ನೀಡಲಿದ್ದಾರೆ. ಈಗಾಗ್ಲೇ ಚಿತ್ರತಂಡ ರಶ್ಮಿಕಾ ಅವರನ್ನು ಭೇಟಿಮಾಡಿ ಮಾತುಕಥೆ ಮುಗಿಸಿದ್ದು ಶಾಹೀದ್ ಜೊತೆ ನಟಿಸಲು ಮನಸು ಮಾಡಿದ್ದಾರಂತೆ.

ಆದ್ರೆ ಇನ್ನು ರಶ್ಮಿಕಾ ಯಾವುದನ್ನು ಅಧಿಕೃತಗೊಳಿಸಿಲ್ಲ ಅದೇನೆ ಇದ್ರೂ ರಶ್ಮಿಕಾ ಟಾಲಿವುಡ್ ನಲ್ಲಿ ಮಿಂಚಿ ಈಗ ಬಾಲಿವುಡ್ ನಲ್ಲೂ ಮಿಂಚಲು ಹಾರುತ್ತಿದ್ದಾರೆ. ಇನ್ನು ಶಾಹೀದ್ ಕಪೂರ್ ಈ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾವನ್ನು ಕಭೀರ್ ಸಿಂಗ್ ಆಗಿ‌ ರಿಮೇಕ್ ಮಾಡಿ ಗಲ್ಲಪೆಟ್ಟಿಗೆಯಲ್ಲಿ 200ಕೋಟಿ ಬಾಚಿತ್ತು, ಈಗ ಮತ್ತೆ ತೆಲುಗಿನ‌ ಜೆರ್ಸಿ ಸಿನಿಮಾ ರಿಮೇಕ್ ಮಾಡಲು ಮುಂದಾಗಿದ್ದು ಯಾವ ರೀತಿ ಕಮಾಲ್ ಮಾಡ್ತಾರೆ ನೋಡಬೇಕು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top